ಪಾಕಿಸ್ತಾನ ಜಿಂದಾಬಾದ್ ಎನ್ನುವವರಿಗೆ ಬಿಡ್ತೀರಿ, ನಾವು ಓಡಾಡ್ಬಾರ್ದಾ: ವಿಧಾನಸೌದದಲ್ಲಿ ಸಿಟ್ಟಾದ ಆರ್ ಆಶೋಕ್

Krishnaveni K

ಗುರುವಾರ, 25 ಜುಲೈ 2024 (09:46 IST)
ಬೆಂಗಳೂರು: ರಾಜ್ಯ ಸರ್ಕಾರದ ಮುಡಾ ಹಗರಣದ ವಿರುದ್ಧ ತನಿಖೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ ನಾಯಕರು ನಿನ್ನೆ ರಾತ್ರಿಯಿಡೀ ಸದನದಲ್ಲೇ ಕಾಲ ಕಳೆದಿದ್ದಾರೆ.

ಆರ್ ಅಶೋಕ್, ಬಿವೈ ವಿಜಯೇಂದ್ರ ಸೇರಿದಂತೆ ಬಿಜೆಪಿ ಶಾಸಕರ ಜೊತೆ ಜೆಡಿಎಸ್ ಶಾಸಕರೂ ಸಾಥ್ ನೀಡಿದ್ದಾರೆ. ಎಲ್ಲರೂ ಸೇರಿ ಸದನದಲ್ಲಿ ಹಾಡು ಕಟ್ಟಿ ಹಾಡುತ್ತಾ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಕಾಲ ಕಳೆದಿದ್ದಾರೆ. ಈ ನಡುವೆ ಸದನದ ಎಲ್ಲಾ ಭಾಗಗಳಲ್ಲಿ ಓಡಾಡಲು ಪೊಲೀಸರು, ಅಧಿಕಾರಿಗಳು ಬಂದು ನಿರ್ಬಂಧ ವಿಧಿಸಲು ಮುಂದಾದರು.

ಸದನದ ಒಳಗೆ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕರನ್ನು ಪೊಲೀಸರು ತಡೆಯಲು ಮುಂದಾದಾಗ ಆರ್ ಅಶೋಕ್ ಸಿಟ್ಟಾದರು. ಹೊರಗೆ ನಿಂತಿದ್ದ ಪೊಲೀಸ್ ಅಧಿಕಾರಿ ಬಳಿ ಬಂದ ಅಶೋಕ್, ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವವರಿಗೆಲ್ಲಾ ಇಲ್ಲಿ ಓಡಾಡಲು ಅವಕಾಶ ಕೊಡ್ತೀರಿ. ನಾವು ಇಲ್ಲಿ ಓಡಾಡಬಾರದಾ? ನಾವೇನು ಕಳ್ಳರಾ? ಇಂತಹ ದರ್ಪ ಎಲ್ಲಾ ತುಂಬಾ ದಿನ ನಡೆಯಲ್ಲ. ಇದು ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿದ ವಿಧಾನಸೌಧ’ ಎಂದು ಕೂಗಾಡಿದರು. ಬಳಿಕ ಪೊಲೀಸರು ಅಲ್ಲಿಂದ ತೆರಳಿದರು.

ಬಳಿಕ ಒಳಗೆ ಕೂತಿದ್ದ ಶಾಸಕರನ್ನು ಅಧಿಕಾರಿಗಳು ಓಡಾಡದಂತೆ ಮನವೊಲಿಸಲು ಬಂದಾಗ ಅಶೋಕ್ ರೇಗಾಡಿದರು. ನಿಮ್ಮ ಮಾತನ್ನೆಲ್ಲಾ ಕೇಳಕ್ಕಾಗಲ್ಲ ಎಂದರು. ಇನ್ನು ರಾತ್ರಿ ಮಲಗುವವರೆಗೂ ಹಾಡು ಕಟ್ಟಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ