ಚುನಾವಣೆ ರಣಕಹಳೆ ಮೊಳಗಿಸಲಿರುವ ರಾಹುಲ್ ಗಾಂಧಿ

ಗುರುವಾರ, 16 ಮಾರ್ಚ್ 2023 (08:30 IST)
ಬೆಳಗಾವಿ : ಬೆಳಗಾವಿಯಿಂದಲೇ ಚುನಾವಣೆ ರಣಕಹಳೆ ಮೊಳಗಿಸಲಿರುವ ರಾಹುಲ್ ಗಾಂಧಿ ಮಾರ್ಚ್ 20ರಂದು ಜಿಲ್ಲೆಗೆ ಆಗಮಿಸಲಿದ್ದಾರೆ. ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ.

ಬೆಳಗಾವಿ ವಿಭಾಗದ 9 ಸಂಘಟನಾತ್ಮಕ ಜಿಲ್ಲೆಗಳ ಕಾರ್ಯಕರ್ತರ ಸಮಾವೇಶವನ್ನು ರಾಹುಲ್ ಗಾಂಧಿ ನಡೆಸಲಿದ್ದು, ಬೆಳಗಾವಿಯಲ್ಲಿ ಪೂರ್ವಭಾವಿ ಸಭೆಯನ್ನು ಡಿಕೆಶಿ ಕರೆದಿದ್ದಾರೆ. ಡಿಕೆಶಿ ನೇತೃತ್ವದಲ್ಲಿ ಬೆಳಗಾವಿ ವಿಭಾಗದ 9 ಸಂಘಟನಾತ್ಮಕ ಜಿಲ್ಲೆಗಳ ನಾಯಕರ ಸಭೆ ನಡೆಯಲಿದ್ದು,

ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ, ಹುಬ್ಬಳ್ಳಿ ನಗರ, ಧಾರವಾಡ ಗ್ರಾಮಾಂತರ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ಆಹ್ವಾನ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ