ಪ್ರಜ್ವಲ್ ರೇವಣ್ಣ ಬದಲು ರವಣ್ಣ ಎಂದು ತಪ್ಪಾಗಿ ಉಚ್ಚರಿಸಿದ ರಾಹುಲ್ ಗಾಂಧಿ

Krishnaveni K

ಗುರುವಾರ, 2 ಮೇ 2024 (14:18 IST)
ಶಿವಮೊಗ್ಗ: ಇಂದು ರಾಜ್ಯದಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ ರಾಹುಲ್ ಗಾಂಧಿ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು. 400 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಜ್ವಲ್ ಒಬ್ಬ ಸಾಮೂಹಿಕ ಅತ್ಯಾಚಾರಿ ಎಂದಿದ್ದಾರೆ.

ಈ ಅತ್ಯಾಚಾರಿಗೆ ದೇಶದ ಪ್ರಧಾನ ಮಂತ್ರಿ ಬೆಂಬಲ ನೀಡುತ್ತಾರೆ. ಈ ಅತ್ಯಾಚಾರಿಯ ಪರವಾಗಿ ಪ್ರಧಾನಿ ಮೋದಿ ನಿಮ್ಮ ಬಳಿ ಬೆಂಬಲ ನೀಡುವಂತೆ ಕೇಳಿಕೊಳ್ಳುತ್ತಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ರೇವಣ್ಣ ಹೆಸರನ್ನು ಅವರು ಪದೇ ಪದೇ ತಪ್ಪಾಗಿ ಉಚ್ಚರಿಸುತ್ತಿದ್ದರು.

ಪ್ರಜ್ವಲ್ ರೇವಣ್ಣ ಎನ್ನುವ ಬದಲು ಪದೇ ಪದೇ ಪ್ರಜ್ವಲ್ ರವಣ್ಣ ಎಂದು ತಪ್ಪಾಗಿ ಉಚ್ಚರಿಸುತ್ತಿದ್ದರು. ಈ ರೀತಿ ಅನೇಕ ಬಾರಿ ರಾಹುಲ್ ಗಾಂಧಿ ತಪ್ಪು ಉಚ್ಚಾರಣೆ ಮೂಲಕ ಟ್ರೋಲ್ ಗೊಳಗಾಗಿದ್ದು ಇದೆ. ಇಂದು ಮತ್ತೆ ಅದೇ ಪ್ರಮಾದವೆಸಗಿದ್ದಾರೆ.

ಇಂದು ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಪರವಾಗಿ ರಾಹುಲ್ ಗಾಂಧಿ ಮತ ಯಾಚಿಸಿದ್ದಾರೆ. ಸಂಜೆ ರಾಯಚೂರಿನಲ್ಲಿ ಚುನಾವಣಾ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತ ಯಾಚನೆ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ