ಪ್ರಜ್ವಲ್ ರೇವಣ್ಣನನ್ನು ಶ್ರೀಕೃಷ್ಣನಿಗೆ ಹೋಲಿಸಿದ್ದಕ್ಕೆ ಸಚಿವ ತಿಮ್ಮಾಪುರ್ ವಿರುದ್ಧ ಆಕ್ರೋಶ
ಮಾಧ‍್ಯಮಗಳೊಂದಿಗೆ ಮಾತನಾಡುವಾಗ ಸಚಿವರು ಪ್ರಜ್ವಲ್ ರೇವಣ್ಣ ಶ್ರೀಕೃಷ್ಣನನ್ನೂ ಮೀರಿಸಿದ್ದಾರೆ. ಶ್ರೀಕೃಷ್ಣನ ಬಳಿ ಸಾವಿರಾರು ಮಹಿಳೆಯರು ಬರುತ್ತಿದ್ದರಂತೆ. ಆದರೆ ಪ್ರಜ್ವಲ್ ಅವರನ್ನೂ ಮೀರಿಸಿದ್ದಾರೆ ಎಂದು ಲೇವಡಿ ಮಾಡಿದ್ದರು. ಅವರ ಈ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಕಾಂಗ್ರೆಸ್ಸಿಗರಿಗೆ ಹಿಂದೂಗಳನ್ನು ತಮಾಷೆ ಮಾಡುವುದು ಎಂದರೆ ಅಭ್ಯಾಸವಾಗಿಬಿಟ್ಟಿದೆ. ಒಬ್ಬ ಕಾಮುಕ ಸಂಸದನನ್ನು ಟೀಕಿಸಲು ಹಿಂದೂ ದೇವರನ್ನು ಉದಾಹರಣೆಯಾಗಿ ನೀಡಲು ತಿಮ್ಮಾಪುರ ಅವರಿಗೆ ಎಷ್ಟು ಧೈರ್ಯವಿರಬೇಕು. ಇದು ಕಾಂಗ್ರೆಸ್ಸಿಗರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಹಲವು ಕಾಮೆಂಟ್ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಪ್ಪಿಸಲಾಗಿದೆ. ಇದೀಗ ಎಸ್ಐಟಿ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪ್ರಜ್ವಲ್ ಮೇಲೆ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ತುಣುಕುಗಳು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.