ಪ್ರಜ್ವಲ್ ರೇವಣ್ಣ ವಿರುದ್ಧ ಎಸ್ ಐಟಿ ತನಿಖೆ ಪ್ರಕ್ರಿಯೆ ಹೇಗೆ ನಡೆಯಲಿದೆ ಎಂಬ ವಿವರ ಇಲ್ಲಿದೆ

Krishnaveni K

ಗುರುವಾರ, 2 ಮೇ 2024 (09:09 IST)
Photo Courtesy: facebook
ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿರುವ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್ ಐಟಿ ತನಿಖೆ ಹೇಗೆ ನಡೆಯಲಿದೆ ಎಂಬ ವಿವರ ಇಲ್ಲಿದೆ.

ಸದ್ಯಕ್ಕೆ ಎಸ್ಐಟಿ ತಂಡ ಮೂರು ತಂಡಗಳಾರಿ ವಿಭಜಿಸಲಾಗಿದೆ. ಈ ಮೂರೂ ತಂಡಗಳೂ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಒಂದು ತಂಡ ಸಂತ್ರಸ್ತ ಮಹಿಳೆಯರ ತನಿಖೆ ನಡೆಸುತ್ತಿದೆ. ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ಗೆ ನೋಟಿಸ್ ನೀಡಲಾಗಿದೆ. ಆದರೆ ಅವರೀಗ ವಿದೇಶದಲ್ಲಿದ್ದು ಒಂದು ವಾರ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಒಪ್ಪಿಗೆ ಸಿಗುವ ಸಾಧ‍್ಯತೆ ಕಡಿಮೆ.

 
ಸಂತ್ರಸ್ತರನ್ನು ವಿಚಾರಣೆ ನಡೆಸುತ್ತಿರುವ ತಂಡವೂ ವಿಡಿಯೋದಲ್ಲಿರುವ ಮಹಿಳೆಯರಿಗೆ ವಿಚಾರಣೆಗೆ ಬರಲು ಮನವಿ ಮಾಡಿದ್ದಾರೆ. ಆದರೆ ಇವರಲ್ಲಿ ಬಹುತೇಕರು ವಿಚಾರಣೆಗೆ ಬರಲು ಒಪ್ಪಿಲ್ಲ. ಹೀಗಾಗಿ ನಿಯಮದ ಪ್ರಕಾರ ಎಸ್ಐಟಿಗೆ ದೂರುದಾರರನ್ನು ಹೊರತುಪಡಿಸಿ ಉಳಿದವರನ್ನು ವಿಚಾರಣೆಗೆ ಕರೆಸಲು ಬಲವಂತ ಮಾಡುವಂತಿಲ್ಲ.

ಪ್ರಜ್ವಲ್ ರೇವಣ್ಣರ  ವಿಡಿಯೋಗಳನ್ನು ಅಸಲಿಯೋ, ನಕಲಿಯೋ ಎಂದು ಪರೀಕ್ಷಿಸಬಹುದು. ಇದು ಪ್ರಮುಖ ವಿಚಾರವಾಗಿದೆ. ಒಂದು ವೇಳೆ ವಿಡಿಯೋ ನಕಲಿ ಎಂದು ಸಾಬೀತಾದರೆ ಪ್ರಕರಣ ಬಿದ್ದುಹೋಗಲಿದೆ. ಅಸಲಿ ಎಂದು ತಿಳಿದುಬಂದರೆ ಪ್ರಕರಣ ಮತ್ತಷ್ಟು ಸ್ಟ್ರಾಂಗ್ ಆಗಲಿದೆ. ಒಂದು ವೇಳೆ ಅಸಲಿ ಎಂದು ಗೊತ್ತಾದರೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಬಹುದು.

ಈ ಪ್ರಕರಣದಲ್ಲಿ ಸಂತ್ರಸ್ತರು ನೀಡುವ ಹೇಳಿಕೆಗಳೂ ಪ್ರಮುಖ ಸಾಕ್ಷಿಯಾಗುತ್ತವೆ. ಒಂದು ವೇಳೆ ಈ ವಿಡಿಯೋದಲ್ಲಿರುವ ಮಹಿಳೆಯರು ಸ್ವಯಂ ಒಪ್ಪಿಗೆಯಿಂದ ಈ ಕೆಲಸ ಮಾಡಿರುವುದಾಗಿ ಹೇಳಿದರೆ ಕೇಸ್ ಬಲಕಳೆದುಕೊಳ್ಳುತ್ತದೆ. ಆದರೆ ಯಾವುದೇ ಹೇಳಿಕೆ ನೀಡಲೂ ಅವರ ಮೇಲೆ ಯಾರೂ ಒತ್ತಡ ಹಾಕುವಂತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ