ರಾಹುಲ್ ಗಾಂಧಿ ಹಿಂದೂ ಸಮಾಜದಲ್ಲಿ ಕ್ಷಮೆ ಕೇಳಬೇಕು: ಆರ್. ಅಶೋಕ್ ಆಕ್ರೋಶ

Sampriya

ಸೋಮವಾರ, 1 ಜುಲೈ 2024 (17:21 IST)
ಬೆಂಗಳೂರು:  ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮೊದಲ ಭಾಷಣದಲ್ಲಿ ಮೈತ್ರಿಕೂಟದ ನಿಜವಾದ ಬಣ್ಣವನ್ನು ಬಹಿರಂಗಪಡಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ವ್ಯಂಗ್ಯ ಮಾಡಿದರು.

ಇಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ತಮ್ಮನ್ನು ತಾವು ಹಿಂದೂಗಳೆಂದು ಕರೆಸಿಕೊಳ್ಳುವವರು ಹಿಂಸಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವಿವಾದ ಸೃಷ್ಟಿಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಆರ್‌ ಅಶೋಕ್ ಅವರು, ಈ ಸಂಬಂಧ ರಾಹುಲ್ ಗಾಂಧಿ ಹಿಂದೂ ಸಮಾಜದಲ್ಲಿ ಕ್ಷಮೆಯಾಚನೆ ಮಾಡಬೇಕೆಂದು ಆಗ್ರಹಿಸಿದರು.

ಆರ್‌ ಅಶೋಕ್ ಪೋಸ್ಟ್‌ನಲ್ಲಿ ಹೀಗಿದೆ:  ಲೋಕಸಭೆಯ ಮೊದಲ ಭಾಷಣದಲ್ಲಿ ರಾಹುಲ್ ಗಾಂಧಿ ಅವರ ಮಾತನಾಡಿ ಇಂಡಿಯಾ ಮೈತ್ರಿಕೂಟದ ನಿಜವಾದ ಬಣ್ಣವನ್ನು ಬಹಿರಂಗಪಡಿಸಿದ್ದಾರೆ. ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಹೀಯಾಳಿಸುವುದು ತುಂಬಾ ಖಂಡನೀಯ ಮತ್ತು ಕ್ಷಮಾಪಣೆಯಿಲ್ಲ. ರಾಹುಲ್ ಗಾಂಧಿ ತಮ್ಮ ಅಸಂವೇದನಾಶೀಲ ಹೇಳಿಕೆಗಾಗಿ ಇಡೀ ದೇಶ ಮತ್ತು ಹಿಂದೂ ಸಮುದಾಯದ ಕ್ಷಮೆಯಾಚಿಸಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ