ವಂದೇ ಮಾತರಂ ಹಾಡಿಗೆ ಗೌರವ ಕೊಡುವಷ್ಟು ತಾಳ್ಮೆ ರಾಹುಲ್ ಗಾಂಧಿಗಿಲ್ಲವೇ? ಬಿಜೆಪಿ ಟೀಕೆ
ಶನಿವಾರ, 28 ಏಪ್ರಿಲ್ 2018 (06:39 IST)
ಬೆಂಗಳೂರು: ರಾಜ್ಯ ಚುನಾವಣೆ ನಿಮಿತ್ತ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಂದೇ ಮಾತರಂ ಹಾಡಿಗೆ 2 ನಿಮಿಷ ಕಾಯುವಷ್ಟು ತಾಳ್ಮೆ ತೋರಲಿಲ್ಲವೇ?
ಹೀಗೊಂದು ವಿಡಿಯೋ ಈಗ ವೈರಲ್ ಆಗುತ್ತಿದೆ. ಕಾರ್ಯಕ್ರಮವೊಂದರ ವೇದಿಕೆಯಲ್ಲಿ ರಾಹುಲ್ ಗಾಂಧಿ ವಂದೇ ಮಾತರಂ ಹಾಡನ್ನು ಬೇಗ ಮುಗಿಸುವಂತೆ ರಾಜ್ಯ ಚುನಾವಣಾ ಉಸ್ತುವಾರಿ ಕೆಸಿ ವೇಣುಗೋಪಾಲ್ ಗೆ ಸಂಜ್ಞೆ ಮಾಡುತ್ತಿರುವ ವಿಡಿಯೋವನ್ನು ಬಿಜೆಪಿ ನಾಯಕಿ ಶಿಲ್ಪಾ ಗಣೇಶ್ ಹಾಕಿಕೊಂಡಿದ್ದು, ಕಾಂಗ್ರೆಸ್ ಅಧ್ಯಕ್ಷರ ಮೇಲೆ ಟೀಕಾಪ್ರಹಾರ ನಡೆಸಿದ್ದಾರೆ.
ರಾಹುಲ್ ಗೆ ಗೊತ್ತಿರುವುದು ಒಬ್ಬ ಮಾತರಂ ಮಾತ್ರ. ಅದು ಸೋನಿಯಾ ಮಾತರಂ. ವಂದೇ ಮಾತರಂ ಹಾಡಿಗೆ ಎರಡು ನಿಮಿಷ ಎದ್ದು ನಿಲ್ಲಲಾಗದ ಇವರನ್ನು ಕಾಂಗ್ರೆಸ್ ಯುವ ನೇತಾರ ಎನ್ನುತ್ತದೆ ಎಂದು ಶಿಲ್ಪಾ ಗಣೇಶ್ ಟ್ವಿಟರ್ ಮೂಲಕ ಟೀಕಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.