ರಾಹುಲ್‌ಗೆ ಮತ್ತೆ ಸಂಸತ್‌ ಸದಸ್ಯತ್ವ

ಶನಿವಾರ, 5 ಆಗಸ್ಟ್ 2023 (17:30 IST)
ಕ್ರಿಮಿನಲ್‌ ಮಾನನಷ್ಟ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಅವರಿಗೆ ನೀಡಲಾಗಿದ್ದ ಶಿಕ್ಷೆಗೆ ಸುಪ್ರೀಂಕೋರ್ಟ್‌ ತಡೆ ನೀಡಿದ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕನ ಸಂಸತ್‌ ಸದಸ್ಯತ್ವದ ಅನರ್ಹತೆ ತೆರವಿಗೆ ದಾರಿ ಸುಗಮವಾಗಿದೆ. ಶಿಕ್ಷೆಗೆ ತಡೆ ಲಭಿಸಿರುವುದರಿಂದ ಮುಂದಿನ ಚುನಾವಣೆಯಲ್ಲಿ ರಾಹುಲ್‌ ಸ್ಪರ್ಧಿಸುವ ಅವಕಾಶವನ್ನೂ ಮರಳಿ ಪಡೆದುಕೊಂಡಿದ್ದಾರೆ. 2024ರ ಲೋಕಸಭೆ ಚುನಾವಣೆಗೂ ಮೊದಲೇ ಅವರ ಶಿಕ್ಷೆಗೆ ತಡೆ ಲಭಿಸಿರುವುದರಿಂದ ಮುಂದಿನ ಚುನಾವಣೆಯಲ್ಲೇ ರಾಹುಲ್‌ ಅವರು ಪ್ರಕರಣದ ಅಂತಿಮ ಆದೇಶ ಹೊರಬೀಳುವವರೆಗೂ ಸ್ಪರ್ಧಿಸಬಹುದಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಕನಿಷ್ಠ ಎರಡು ವರ್ಷಗಳ ಜೈಲುಶಿಕ್ಷೆಗೆ ಗುರಿಯಾದ ಜನಪ್ರತಿನಿಧಿಗಳು ಶಾಸನಸಭೆಯ ಸದಸ್ಯತ್ವ ಕಳೆದುಕೊಳ್ಳುವುದಷ್ಟೇ ಅಲ್ಲ, ಶಿಕ್ಷೆಯ ಅವಧಿ ಮುಗಿದ ಬಳಿ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವ ಹಕ್ಕು ಕಳೆದುಕೊಳ್ಳುತ್ತಾರೆ. ಆದರೆ ಸದ್ಯಕ್ಕೆ ರಾಹುಲ್ ಈ ಶಿಕ್ಷೆಯಿಂದ ಪಾರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ