ಪ್ರವಾಹದ ರಭಸಕ್ಕೆ ಕೊಚ್ಚಿಹೋದ ರೈಲು ಸೇತುವೆ

ಭಾನುವಾರ, 21 ಆಗಸ್ಟ್ 2022 (21:37 IST)
ಹಲವೆಡೆ ಪ್ರವಾಹ ಉಂಟಾಗಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿದೆ, ಬೆಳೆ, ಆಸ್ತಿ ಪಾಸ್ತಿಗಳಿಗೂ ಹಾನಿಯಾಗಿವೆ. ಅದರಂತೆ ಪಂಜಾಬ್ ಮತ್ತು ಹಿಮಾಚಲದ ಗಡಿಯಲ್ಲಿರುವ ಕಾಂಗ್ರಾ ಜಿಲ್ಲೆಯ ಚಕ್ಕಿ ನದಿಯ ಮೇಲಿನ 800 ಮೀಟರ್ ಉದ್ದದ ರೈಲ್ವೆ ಸೇತುವೆ ಕುಸಿದಿದೆ. ಚಕ್ಕಿ ನದಿಗೆ ಹರಿಯುವ ಪ್ರವಾಹಕ್ಕೆ ಪಿಲ್ಲರ್ ಕೊಚ್ಚಿಹೋಗಿ ಈ ಅವಘಡ ಸಂಭವಿಸಿದೆ ಎಂದು ಸಂಬಂಧಿತ ಮೂಲಗಳು ತಿಳಿಸಿವೆ. ಪರಿಣಾಮವಾಗಿ ಸೇತುವೆಗೆ ಹೊಸ ಪಿಲ್ಲರ್‌ ನಿರ್ಮಾಣವಾಗುವವರೆಗೆ ಪಠಾಣ್‌ಕೋಟ್‌ ಮತ್ತು ಜೋಗಿಂದರ್‌ ನಗರ ನಡುವಿನ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.1928ರಲ್ಲಿ ಬ್ರಿಟಿಷರು ನಿರ್ಮಿಸಿದ ಈ ರೈಲ್ವೇ ಸೇತುವೆಯಲ್ಲಿ ಪಠಾಣ್‌ಕೋಟ್ ಮತ್ತು ಜೋಗಿಂದರ್ ನಗರ್ ನಡುವೆ ಪ್ರತಿದಿನ ಏಳು ರೈಲುಗಳು ಸಂಚರಿಸುತ್ತವೆ. ಪಾಂಗ್ ಅಣೆಕಟ್ಟಿನ ವನ್ಯಜೀವಿ ಅಭಯಾರಣ್ಯದ ನೂರಾರು ಹಳ್ಳಿಗಳಿಗೆ ರಸ್ತೆ ಸಂಪರ್ಕ, ಬಸ್​ಗಳ ಸೇವೆ ಇಲ್ಲದಿರುವ ಹಿನ್ನಲೆ ರೈಲುಗಳು ಇಲ್ಲಿನ ಜೀವನಾಡಿಯಾಗಿದೆ.ನದಿ ಪಾತ್ರದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ 90 ವರ್ಷಗಳಷ್ಟು ಹಳೆಯದಾದ ಈ ಸೇತುವೆಗೆ ಹಾನಿಯಾಗಿದ್ದು, ಸದ್ಯ ಪ್ರವಾಹದ ರಭಸಕ್ಕೆ ಒಂದು ಪಿಲ್ಲರ್ ಕುಸಿದು ಬಿದ್ದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ