ಕೊರೊನಾ ಎದುರಿಸಲು ರೈಲ್ವೆ ಇಲಾಖೆ ಸಿದ್ದ

ಮಂಗಳವಾರ, 18 ಜನವರಿ 2022 (14:48 IST)
ಕೋವಿಡ್ 3ನೇ ಅಲೆ ಅಬ್ಬರ ಹೆಚ್ಚಾಗತ್ತಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.
ಸರ್ಕಾರ ಕೋವಿಡ್ ಸೋಂಕು ಹರಡುವಿಕೆಗೆ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿದೆ.
 
ರೈಲು ಸಿಬ್ಬಂದಿಗಳ ಆರೋಗ್ಯ ರಕ್ಷಣೆಗಾಗಿ ಕೋವಿಡ್ 19ರ ಹೊಸ ಅಲೆಯ ಸವಾಲುಗಳನ್ನು ಎದುರಿಸಲು ನೈಋತ್ಯ ರೈಲ್ವೆ ಮೂರು ವಿಭಾಗದಲ್ಲಿಯೂ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಬೆಂಗಳೂರಿನಲ್ಲಿ 149, ಮೈಸೂರಿನಲ್ಲಿ 74 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಈ ಮೂರು ಆಸ್ಪತ್ರೆಗಳಲ್ಲಿ ಫೀವರ್ ಕ್ಲಿನಿಕ್ ದಿನದ 24 ಗಂಟೆಯೂ ಕೆಲಸ ಮಾಡುತ್ತಿದೆ. ಶಂಕಿತ ಪ್ರಕರಣಗಳ ಆರ್‌ಎಟಿ ಮತ್ತು ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ