ಮಳೆಗಾಲದಲ್ಲಿ ಮಳೆಗಾಗಿ ಜನ ಹಾತೊರೆಯುತ್ತಿದ್ದರು.ಕಳೆದ ರಾತ್ರಿ ಸುರಿದ ಜೋರು ಮಳೆಗೆ ಇಳೆ ತಂಪಾಗಿದೆ.ಸೂಕ್ತ ಸಮಯಕ್ಕೆ ಸರಿಯಾಗಿ ಮಳೆಯಾಗದೆ ರೈತ ಕಂಗಾಲಾಗಿದ್ದರು.ಕಳೆದರಾತ್ರಿ ಬೆಂಗಳೂರು, ಯಲಹಂಕ, ದೇವನಹಳ್ಳಿ,ದೊಡ್ಡಬಳ್ಳಾಪುರ, ನೆಲಮಂಗಲ ಸುತ್ತಾಮುತ್ತಾ ರಾತ್ರಿಯಿಡಿ ಮಳೆ ಸುರಿದಿದೆ.
ನೆನ್ನೆ ರಾತ್ರಿ 8ಕ್ಕೆ ಪ್ರಾರಂಭವಾದ ಜೋರುಮಳೆ ತುಂತುರು ರೂಪದಲ್ಲಿ ರಾತ್ರಿಯಿಡೀ ಸುರಿದಿದೆ.ಇದರಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರದ ರೈತನ ಮುಖದಲ್ಲಿ ಸಂತಸ ಮೂಡಿದೆ.ಕೈಗೆ ಬಂದ ಬೆಳೆ ಮಳೆಯಿಲ್ಲದೆ ಒಣಗಿತ್ತುಮತೆನೆಯೊಡೆಯಬೇಕಿದ್ದ ಬೆಳೆಗೆ ಬೇಕಿತ್ತು ಮಳೆಯ ಸಿಂಚನವಾಗಿದೆ.ಮಳೆಯಿಲ್ಲದೇ ಇನ್ನೇನು ಬೆಳೆಯಾಗದು ಎಂಬ ಸ್ಥಿತಿಯಲ್ಲಿ ಬಿದ್ದ ಜೋರು ಮಳೆ ಬಂದಿದೆ.ಬೆಂಗಳೂರು ನಗರ, ಬೆಂಗಳೂರು ಗ್ರಾ. ಪ್ರದೇಶಗಳಲ್ಲಿ ರೈತರು ನಿಟ್ಟಿಸಿರು ಬಿಟ್ಟಿದ್ದಾರೆ.