ಮಳೆ ನೀರು ಚರಂಡಿ ಸೇರ್ಪಡೆಗಿಲ್ಲ ಕಡಿವಾಣ..!

ಬುಧವಾರ, 23 ಆಗಸ್ಟ್ 2023 (16:36 IST)
ಮಳೆಗಾಲದಲ್ಲಿ ಮ್ಯಾನ್‌ ಹೋಲ್‌ ಗಳು  ಹುಕ್ಕಿ ಹರಿಯುವುದರಿಂದ ಇದನ್ನ ತಡೆಯಲು ಮಳೆ ನೀರು ಕೊಳವೆಗಳನ್ನು ಒಳಚರಂಡಿ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವುದನ್ನು ನಿಷೇಧಿ ಸಲಾಗಿದೆ.ಆದ್ರೂ ಕೂಡ ಅಕ್ರಮವಾಗಿ ಮಳೆ ನೀರನ್ನು ಒಳಚರಂಡಿಗೆ ಬಿಡುತ್ತಿರುವವರ ಸಂಖ್ಯೆ ಜೋರಾಗಿದೆ .ಮಳೆಗಾಲದಲ್ಲಿ ಮ್ಯಾನ್ ಹೋಲ್ ಗಳು ಉಕ್ಕಿ ಹರಿಯುತ್ತಿರುವುದರಿಂದ ಆಗುತ್ತಿರುವ ಮಹಾಪುರ ತಡೆಯಲು ಮಳೆ ನೀರು ಕೊಳವೆಗಳನ್ನು ಒಳಚರಂಡಿ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವುದನ್ನು ತಡೆಯಲಾಗಿದೆ, ಇಷ್ಟಾದರೂ ಕೂಡ ಅಕ್ರಮವಾಗಿ ಮಳೆ ನೀರನ್ನು ಒಳಚರಂಡಿಗೆ ಬಿಡುತ್ತಿರುವವರ ಸಂಖ್ಯೆ ಮಿತಿಮೀರಿದ್ದು ಇಂತಹ ಸಂಪರ್ಕಗಳನ್ನು ಪತ್ತೆ ಮಾಡುವುದು ಜಲ ಮಂಡಳಿಗೆ ಸವಾಲಾಗಿ ಪರಿಣಮಿಸಿದೆ.
 
ಜಲಮಂಡಳಿ ನಗರದಲ್ಲಿ ಮೂರು ಸಾವಿರ ಕಿ ಮೀ ಉದ್ದದ ಒಲಚರಂಡಿ ಮಾರ್ಗದ ಜಾಲವನ್ನು ನಿರ್ಮಿಸಿದೆ. ಜಲಮಂಡಳಿ ಕಾಯಿದೆ 72 ರ ಅನ್ವಯ ಕಟ್ಟಡಗಳ ತ್ಯಾಜ್ಯ ನೀರು ಮತ್ತು ಮಲ- ಮೂತ್ರ ತ್ಯಾಜ್ಯದ ನೀರಿನ ಕೊಳವೆಗಳನಷ್ಟೇ ಒಳಚರಂಡಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸಬೇಕಾಗಿದೆ. ಅಥವಾ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡು ಮಳೆ ನೀರನ್ನು ಸಂಗ್ರಹಿಸಬೇಕು ಇಲ್ಲವೇ ಇಲ್ಲವೇ ಬಿಬಿಎಂಪಿ ಚರಂಡಿಗೆ ಬಿಡಬೇಕು ಆದ್ರೆ ಜನರು ಮಾತ್ರ ಅಕ್ರಮವಾಗಿ ಮಳೆ ನೀರನ್ನು ಒಳಚರಂಡಿಗೆ ಬಿಡುತ್ತಿರಿವುದು ಜಲಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
 
 ಸದ್ಯಕ್ಕೆ ಜಲಮಂಡಳಿ ಅಧಿಕಾರಿಗಳು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೋ ಅಥವಾ ಅಂತಹ ಜನರಿಗೆ ದಂಡ ಹಾಕಿ ಕಡಿವಾಣ ಹಾಕುವುದೋ ಅಂತ ತಲೆಕೆಡಿಸಿಕೊಳ್ಳುವತಾಗಿದೆ.ಒಟ್ಟಾರೆ ಯಾಗಿ ಹೇಳೋದಾದ್ರೆ ಈಗಾಗ್ಲೇ ಜನ ಮಳೆಯಿಂದಾಗಿ ತತ್ತರಿಸಿ ಹೋಗಿದ್ದು, ಮಳೆಯ ನೀರನ್ನ ಒಳಚರಂಡಿಗೆ ಬಿಡೋದ್ರಿಂದ ಇನ್ನಷ್ಟು ಸಂಕಷ್ಟ ಎದಸೋದಂತೂ ಪಕ್ಕ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ