ಧಾರಾಕಾರ ಮಳೆಗೆ ರಾಮನಗರದ ಕೂಟಗಲ್ ಸೇತುವೆ ಸಂಪೂರ್ಣ ಕುಸಿದು ಬಿದ್ದಿದೆ. ಸೇತುವೆ ಕುಸಿತದಿಂದಾಗಿ ಮೆಳೇಹಳ್ಳಿ ಸೇರಿದಂತೆ ಐದಾರು ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ಮೆಳೇಹಳ್ಳಿ. ಮಾರೇಗೌಡನದೊಡ್ಡಿ. ಅರಳಿಮಾರದೊಡ್ಡಿ, ಜೋಗಿದೊಡ್ಡಿ ಅಂಕನಹಳ್ಳಿ. ಹುಣಸೆದೊಡ್ಡಿ ಗ್ರಾಮಗಳಿಗೆ ಸಂಪರ್ಕ ಸಂಪೂರ್ಣ ಬಂದ್ ಆಗಿದ್ದು, ಸೇತುವೆ ಕುಸಿದು ಬಿದ್ದ ಹಿನ್ನಲೆಯಲ್ಲಿ 5 ಕಿಲೋ ಮೀಟರ್ ದೂರ ಸಂಚರಿಸಿ ಗ್ರಾಮಗಳಿಗೆ ಹೋಗುವ ಪರಿಸ್ಥಿತಿ ಎದುರಾಗಿದೆ. ಅನೇಕ ವರ್ಷಗಳಿಂದ ಸೇತುವೆ ದುಸ್ಥಿತಿಯಲ್ಲಿದ್ದರೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೇ ಇರುವುದೇ ಈಗ ಪರದಾಟಕ್ಕೆ ಕಾರಣವಾಗಿದೆ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಜೊತೆಗೆ ಹಲವು ಬಾರಿ ಈ ಸಂಬಂಧ ಅಧಿಕಾರಿಗಳ ಬಳಿ ಮನವಿ ಮಾಡಿದ್ರೂ ಕ್ಯಾರೇ ಅಂದಿಲ್ಲ ಅಂತ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೇ ಶೀಘ್ರವಾಗಿ ಸೇತುವೆ ನಿರ್ಮಿಸುವಂತೆ ಆಗ್ರಹಿಸಿದ್ದಾರೆ.