ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಜೀನ್ ಥೆರಪಿ ಆರಂಭವಾಗ್ತಿದೆ. ವಿದೇಶದಲ್ಲಿ ಪ್ರಸಿದ್ಧಿ ಇರುವ ಈ ಥೆರಪಿ ಇದೇ ಮೊದಲು ಭಾರತಕ್ಕೆ ಕಾಲಿಟ್ಟಿದ್ದು, ರಾಜಧಾನಿಯ ನಾರಾಯಣ ನೇತ್ರಾಲಯದಲ್ಲಿ ಈ ಥೆರಪಿ ಮೊದಲ ಬಾರಿಗೆ ಪ್ರಯೋಗ ಮಾಡಲಾಗುತ್ತಿದೆ. ಹೌದು ನಾರಾಯಣ ನೇತ್ರಾಲಯ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ದೇಶಕ್ಕೆ ಇದು ಹೆಮ್ಮೆಯ ವಿಷಯವಾಗಿದೆ.ಅನುವಂಶಿಕ ಅಂದ್ರೆ ಒಂದೇ ಕುಟುಂಬದ ಗಂಡು, ಹೆಣ್ಣು ಮದುವೆಯಾದ್ರೆ ಮಕ್ಕಳಲ್ಲಿ ಕುರುಡುತನ ಕಾಣಿಸುತ್ತೆ. ದೃಷ್ಟಿಗೆ ಸಂಬಂಧಿಸಿದಂತೆ ಹುಟ್ಟಿದ ಮಕ್ಕಳಿಗೆ ಹಲವು ಸಮಸ್ಯೆ ಎದುರಾಗುತ್ತೆ. ಈ ಸಮಸ್ಯೆಗೆ ಪರಿಹಾರವೇ
ಈ ಜೀನ್ ಥೆರಪಿಯಾಗಿದೆ. ಇದರಲ್ಲಿ ಮಕ್ಕಳ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತದೆ. ಇನ್ನು ಈ ಬಗ್ಗೆ ನಾರಾಯಣ ನೇತ್ರಾಲಯ ಇದೀಗ ಪ್ರಯೋಗ ಮಾಡಿ ತೋರಿಸಿದೆ. ನಾರಾಯಣ ನೇತ್ರಾಲಯದ 10 ವರ್ಷಗಳ ಗ್ರೋ ನಿರಂತರ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ. 70 ಲಕ್ಷಕ್ಕೂ ಹೆಚ್ಚು ಜನರು ಜೀನ್ ಸಮಸ್ಯೆಗೆ ಒಳಗಾಗುತ್ತಾರೆ. ಇದಕ್ಕೆ ಈ ಥೆರಪಿಯಿಂದ ಪರಿಹಾರ ಸಾದ್ಯವಾಗಲಿದೆ. ಈ ಪ್ರಯೋಗಾಲಯ ರೆಡಿ ಮಾಡಲು 4 ವರ್ಷ ಹಿಡಿದಿದೆ. ಈ ಥೆರಪಿಗೆ ಹೆಚ್ಚು ಹಣ ಬೇಕಾಗುತ್ತದೆ. ಹೀಗಾಗಿ ಇದರ ಖರ್ಚಿನ ಬಗ್ಗೆ ಸರ್ಕಾರದ ಜೊತೆ ಮಾತನಾಡಲು ನಾರಾಯಣ ನೇತ್ರಾಲಯ ಮುಂದಾಗುತ್ತಿದೆ.