ರಾಜ್ಯಸಭಾ ಸದಸ್ಯರ ಅಮಾನತು: ಪ್ರತಿಪಕ್ಷಗಳ ನಾಯಕರ ಸಭೆ ಕರೆದ ಕೇಂದ್ರ

ಸೋಮವಾರ, 20 ಡಿಸೆಂಬರ್ 2021 (21:55 IST)
ಸಂಸತ್ ಚಳಿಗಾಲದ ಅಧಿವೇಶದಲ್ಲಿ ಕಾಂಗ್ರೆಸ್‌, ಟಿಎಂಸಿ, ಶಿವಸೇನೆ ಸೇರಿದಂತೆ 5 ರಾಜಕೀಯ ಪಕ್ಷಗಳ 12 ರಾಜ್ಯಸಭಾ ಸದಸ್ಯರನ್ನು ಸದನದಿಂದ ಅಮಾನತು ಮಾಡಲಾಗಿತ್ತು. ಈ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಪ್ರತಿಪಕ್ಷಗಳ ನಾಯಕರ ಜತೆ ಸಭೆ ನಡೆಸಲಿದೆ.
ಈ ಬಗ್ಗೆ ಎಲ್ಲಾ ಪ್ರತಿಪಕ್ಷಗಳ ನಾಯಕರಿಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಪತ್ರ ಬರೆದಿದ್ದು. ಇಂದು ಬೆಳಗ್ಗೆ ಸಂಸತ್ತಿನಲ್ಲಿ ನಡೆಯಲಿರುವ ಸಭೆಗೆ ಹಾಜರಾಗುವಂತೆ ತಿಳಿಸಿದ್ದಾರೆ.
ಈಗಾಗಲೇ ರಾಜ್ಯಸಭೆಯಲ್ಲಿ ಅಮಾನತಿನ ಬಗ್ಗೆ ಪ್ರತಿಪಕ್ಷಗಳು ಕಿಡಿಕಾರುತ್ತಿದ್ದು, ಅಮಾನತುಗೊಂಡ ಮರುಕ್ಷಣದಿಂದ ಪ್ರತಿದಿನ 12 ಸಂಸದರು ಸಂಸತ್ತಿನ ಬಳಿ ಇದ್ದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಅಮಾನತು ಈ ರಾಜ್ಯಸಭಾ ಸದಸ್ಯರು ಕಳೆದ ಬಾರಿಯ ಅಧಿವೇಶನದಲ್ಲಿ ದೊಡ್ಡಮಟ್ಟದಲ್ಲಿ ಗದ್ದಲ ಸೃಷ್ಟಿ ಮಾಡಿ, ಹಿಂದೆಂದೂ ಕಂಡಿರದ ರೀತಿಯಲ್ಲಿ ವರ್ತಿಸಿದ್ದರು. ಪೀಠದ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಈ ಬಾರಿ ಅಧಿವೇಶನದಿಂದ ಆ 12 ಸದಸ್ಯರನ್ನು ಅಮಾನತು ಮಾಡಲಾಗಿತ್ತು. ಇದೇ ಡಿ.23ರಂದು ಅಧಿವೇಶನ ಮುಕ್ತಾರಗೊಳ್ಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ