ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ರಮೇಶ್ ಜಾರಕಿಹೊಳಿ

ಸೋಮವಾರ, 30 ಡಿಸೆಂಬರ್ 2019 (09:52 IST)
ಬೆಳಗಾವಿ : ಬೆಳಗಾವಿ ಗ್ರಾಮೀಣ ಶಾಸಕರನ್ನ ಗೆಲ್ಲಿಸಿದ್ದು ನನ್ನ ತಪ್ಪು ಎಂದು ಶಾಸಕ ರಮೇಶ್ ಜಾರಕಿಹೊಳಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಹೇಳದೆ ವಾಗ್ದಾಳಿ ನಡೆಸಿದ್ದಾರೆ.



ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ್ಳೆಯ ಸಂಸ್ಕೃತಿಯ ಹೆಣ್ಣುಮಗಳೆಂದು ನಾನು ಗೆಲ್ಲಿಸಿದೆ. ಅವರನ್ನು ಗೆಲ್ಲಿಸಿದ ತಪ್ಪಿಗೆ ನಾನು ಜನರಲ್ಲಿ ಕ್ಷಮೆ ಕೇಳುತ್ತೇನೆ. ಇನ್ಮುಂದೆ ಈ ರೀತಿಯಾಗಬಾರದು. ಮರಾಠಿ ಸಮುದಾಯದ ಮುಖಂಡರೆಲ್ಲರೂ ಒಂದಾಗಬೇಕು ಎಂದು ಕರೆ ನೀಡಿದ್ದಾರೆ.


ಹಾಗೇ ನಿವೆಲ್ಲಾ ಒಂದಾಗಿ ನಿಮ್ಮಲ್ಲಿ ಒಬ್ಬರು ಮುಂದಿನ ಚುನಾವಣೆಯಲ್ಲಿ ನಿಲ್ಲಿ. ಯಾರು ಸ್ಪರ್ಧೆ ಮಾಡುತ್ತಾರೋ ಅವರ ಪರ ನಾನಿರುತ್ತೇನೆ. ನನ್ನ ಕಡೆಯಿಂದ ಎಲೆಕ್ಷನ್ ಫಂಡ್ 5 ಕೋಟಿ ಕೊಡುತ್ತೇನೆ. ಉಳಿದ ಸಮುದಾಯದ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ಮುಂದಿನ ಬಾರಿ ಬೆಳಗಾವಿ ಗ್ರಾಮೀಣ, ಯಮಕನಮರಡಿ, ಖಾನಾಪುರದಲ್ಲಿ ಬಜೆಪಿ ಗೆಲ್ಲಿಸುವ  ಜವಾಬ್ದಾರಿ ನನ್ನದು ಎಂದು ಭಾಷಣದುದ್ದಕ್ಕೂ ಜಾರಕಿಹೊಳಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಹೇಳದೆ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ