ಬೆಂಗಳೂರು: ಕೋರ್ಟ್ ಹೇಳಿದ್ರೂ ಬೆಲೆಯಿಲ್ವಾ... ಹೀಗಂತ ಆರ್ ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಪಿಡಿಒ ಅಮಾನತು ಆದೇಶಕ್ಕೆ ಕೋರ್ಟ್ ತಡೆ ನೀಡಿದ್ದಕ್ಕೆ ಪ್ರಿಯಾಂಕ್ ಖರ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಕ್ಕೆ ನೆಟ್ಟಿಗರು ಕಿಡಿ ಕಾರಿದ್ದಾರೆ.
ಆರ್ ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಪಿಡಿಒ ಅಧಿಕಾರಿಯನ್ನು ರಾಜ್ಯ ಸರ್ಕಾರ ಅಮಾನತು ಮಾಡಿತ್ತು. ಈ ಕುರಿತು ಪಿಡಿಒ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸರ್ಕಾರದ ಆದೇಶಕ್ಕೆ ಕೋರ್ಟ್ ತಡೆ ನೀಡಿದೆ. ಇದರ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಯವರು ಕೋರ್ಟ್ ಆದೇಶವನ್ನು ತಿರುಚಿ ಹೇಳುವುದರಲ್ಲಿ ನಿಸ್ಸೀಮರು. ಅಸಲಿಗೆ ಪಿಡಿಒ ಅಮಾನತನ್ನು ಅಂತಿಮ ತೀರ್ಪು ಬರುವವರೆಗೆ ಮಾತ್ರ ಕೋರ್ಟ್ ತಡೆ ಹಿಡಿದಿದೆ. ಅಮಾನತು ರದ್ದುಗೊಳಿಸಲು ಕೋರ್ಟ್ ಆದೇಶಿಸಿಲ್ಲ. ಆದರೆ ಈ ತಡೆ ವಿರುದ್ಧ ರಾಜ್ಯ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸಲು ನ್ಯಾಯಮಂಡಳಿ ಸೂಚಿಸಿದೆ. ನಾವು ಈ ಬಗ್ಗೆ ಹೇಳಿಕೆ ಸಲ್ಲಿಸಿಲಿದ್ದೇವೆ, ಈ ವಿಚಾರವನ್ನು ಎದುರಿಸಲಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಇದಕ್ಕೆ ನೆಟ್ಟಿಗರು ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ರೂ ಕೋರ್ಟ್ ಆದೇಶ ಬಂದ ಮೇಲೂ ನಿಮ್ಮ ಆರ್ ಎಸ್ಎಸ್ ಸಮರ ನಿಂತಿಲ್ವಾ? ಮಾಡಲು ನಿಮ್ಮ ಇಲಾಖೆಯಲ್ಲೇ ಬೇಕಾದಷ್ಟು ಕೆಲಸಗಳಿವೆ. ಅದನ್ನು ಬಿಟ್ಟು ಆರ್ ಎಸ್ಎಸ್ ಜಪ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಬಿಡಬೇಡಿ ಸರ್, ಮೇಲ್ಮನವಿ ಸಲ್ಲಿಸಿ ಎಂದು ಸಚಿವರ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ.