ಮರ್ಯಾದಾ ಪುರುಷೋತ್ತಮ ಶ್ರೀರಾಮನವಮಿಗೆ ಶುಭ ಕೋರಿ ಟ್ರೋಲ್ ಆದ ರಮೇಶ್ ಜಾರಕಿಹೊಳಿ

ಗುರುವಾರ, 22 ಏಪ್ರಿಲ್ 2021 (09:52 IST)
ಬೆಂಗಳೂರು: ನಿನ್ನೆ ದೇಶದಾದ್ಯಂತ ಶ್ರೀರಾಮನವಮಿ ಆಚರಿಸಲಾಗಿತ್ತು. ಹೆಚ್ಚಿನವರು ಸಾಮಾಜಿಕ ಜಾಲತಾಣದಲ್ಲಿ ಈ ಪ್ರಯುಕ್ತ ಶುಭಕೋರಿದ್ದರು. ಅದರಂತೆ ಇತ್ತೀಚೆಗೆ ಸೆಕ್ಸ್ ಸಿಡಿ ಪ್ರಕರಣದಲ್ಲಿ ವಿವಾದಕ್ಕೀಡಾಗಿದ್ದ ಶಾಸಕ ರಮೇಶ್ ಜಾರಕಿಹೊಳಿ ಕೂಡಾ ಶುಭ ಕೋರಿದ್ದರು.


ಆದರೆ ರಮೇಶ್ ಜಾರಕಿಹೊಳಿ ರಾಮನವಮಿಗೆ ಶುಭ ಕೋರಲು ಹೋಗಿ ತಾವೇ ಟ್ರೋಲ್ ಆಗಿದ್ದಾರೆ. ಶ್ರೀರಾಮಚಂದ್ರ ಏಕಪತ್ನಿ ವ್ರತಸ್ತ, ಹೆಣ್ಣಿನ ವಿಚಾರದಲ್ಲಿ ಅತ್ಯಂತ ಆದರ್ಶ ವ್ಯಕ್ತಿತ್ವ.

ಆದರೆ ರಮೇಶ್ ಜಾರಕಿಹೊಳಿ ಇತ್ತೀಚೆಗೆ ಹೆಣ್ಣಿನ ವಿಚಾರದಲ್ಲೇ ವಿವಾದಕ್ಕೀಡಾದವರು. ಈಗ ಏಕಪತ್ನಿವ್ರತಸ್ತನ ಹಬ್ಬಕ್ಕೆ ಶುಭ ಕೋರಿದ್ದಕ್ಕೆ ನೆಟ್ಟಿಗರು ವ್ಯಂಗ್ಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ