ರಾಜ್ಯದಲ್ಲಿ ಹೊಸ ಕೊರೋನಾ ರೂಲ್ಸ್ ಏನೇನು? ಇಲ್ಲಿ ನೋಡಿ

ಬುಧವಾರ, 21 ಏಪ್ರಿಲ್ 2021 (09:28 IST)
ಬೆಂಗಳೂರು: ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಬದಲು ರಾಜ್ಯ ಸರ್ಕಾರ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ. ಅವು ಯಾವುವು ನೋಡೋಣ.


ಇಂದು ರಾತ್ರಿ 9 ಗಂಟೆಯಿಂದ ಮುಂದಿನ 14 ದಿನಗಳ ಕಾಲ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಶನಿವಾರ ಮತ್ತು ಭಾನುವಾರ ದಿನವಿಡೀ ಕರ್ಫ್ಯೂ ಜಾರಿಯಲ್ಲಿರಲಿದೆ. ಥಿಯೇಟರ್, ಶಾಲೆ, ಕಾಲೇಜು ಎಲ್ಲವೂ ಬಂದ್ ಆಗಿರಲಿದೆ. ಕೇವಲ ತುರ್ತು ಸೇವೆ, ಅಗತ್ಯ ವಸ್ತು ಹೊರತುಪಡಿಸಿ ಉಳಿದ ಸೇವೆಗಳಿರಲ್ಲ. ದೇವಸ್ಥಾನ, ಮಸೀದಿ, ಚರ್ಚ್ ನಲ್ಲಿ ನಿತ್ಯ ಪ್ರಾರ್ಥನೆಗಷ್ಟೇ ಅವಕಾಶ. ಶಾಪಿಂಗ್ ಮಾಲ್, ಜಿಮ್, ಕ್ರೀಡಾ ಸಂಕೀರ್ಣಗಳು, ಪಾರ್ಕ್, ಎಲ್ಲಾ ರೀತಿಯ ಬಹಿರಂಗ ಸಮಾವೇಶಗಳು, ಕಾರ್ಯಕ್ರಮಗಳು ಬಂದ್ ಆಗಲಿವೆ.

ಆದರೆ ಬಸ್, ವಿಮಾನ, ಟ್ಯಾಕ್ಸಿ ಸೇವೆ, ಸರಕು ಸಾಗಣೆ ವಾಹನ, ವೈದ್ಯಕೀಯ ಸೇವೆ, ಆನ್ ಲೈನ್ ಕ್ಲಾಸ್, ಹೋಟೆಲ್ ಗಳಲ್ಲಿ ಪಾರ್ಸಲ್‍, ತೆರೆದ ಪ್ರದೇಶದಲ್ಲಿ ಮಾರ್ಕೆಟ್, ನಿರ್ಮಾಣ ಚಟುವಟಿಕೆಗಳು, ಕೈಗಾರಿಕೆಗಳು, ಆಹಾರ ಮಳಿಗೆಗಳು, ಮಾಧ‍್ಯಮಗಳು, ಸರ್ಕಾರಿ ಕಚೇರಿಗಳು ತೆರೆದಿರಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ