ಬೊಮ್ಮಾಯಿ ನಾಯಕತ್ವದ ಬಗ್ಗೆ ಅಸಮಧಾನ ಹೊರಹಾಕಿದ ರಮೇಶ್ ಕುಮಾರ್
ಸಿಎಂ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಚುನಾವಣೆಗೆ ಹೋದರೆ ಆಗಲ್ಲ, ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಹೋಗಬೇಕು ಎಂದು ಕೆಲವು ಶಾಸಕರು ಪತ್ರ ಬರೆದಿದ್ದಾರೆ ಎಂದು ಮಾಜಿ ಎಂಎಲ್ ಸಿ ರಮೇಶ್ ಕುಮಾರ್ ಹೇಳಿದ್ದಾರೆ. ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ಲಿಖಿತ ಪತ್ರ ಬರೆದು ಬೊಮ್ಮಾಯಿ ಇಟ್ಟುಕೊಂಡು ಚುನಾವಣೆಗೆ ಹೋದರೆ ಆಗಲ್ಲ ಅಂತ 30 ಶಾಸಕರು ಪತ್ರ ಬರೆದು ಸಹಿ ಹಾಕಿ ಜೆಪಿ ನಡ್ಡಾಗೆ ಕಳಿಸಿದ್ದಾರೆ. ಇನ್ನೂ ಆ ಶಾಸಕರು ಯಡಿಯೂರಪ್ಪ ಬೆಂಬಲಿಗರು ಅವರು ಈ ರೀತಿಯಾಗಿ ನೈಜ ಸ್ಥಿತಿಯನ್ನ ಹೇಳಿದ್ದಾರೆ. ಈ ಮೂಲಕ ಬಿಜೆಪಿ ಒಡೆದ ಮನೆ ಆಗಿದೆ ಎಂದು ಹೊಸ ಬಾಂಬ್ ಸ್ಪೋಟಿಸಿದ್ದಾರೆ.