ರಮೇಶ್ ಜಾರಕಿಹೊಳಿ ಮತ್ತೆ ಕಾಂಗ್ರೆಸ್ ಸೇರ್ಪಡೆ?

ಶನಿವಾರ, 20 ಜೂನ್ 2020 (21:26 IST)
ಸಚಿವ ರಮೇಶ ಜಾರಕಿಹೊಳಿ ಮರಳಿ ಕಾಂಗ್ರೆಸ್ ಗೆ ಹೋಗುತ್ತಾರೆ....

ಹೀಗಂತ ಕಾಂಗ್ರೆಸ್ ನ ಈಶ್ವರ ಖಂಡ್ರೆ ಹೇಳಿರುವುದು ಅವರ ಭ್ರಮೆ. ಈಶ್ವರ ಖಂಡ್ರೆ ಅವರು ಕಲ್ಪನಾ ಲೋಕದಲ್ಲಿ ಜೀವನ‌ ನಡೆಸುತ್ತಿದ್ದಾರೆ. ಅವರು ಸರಿಯಾಗಿ ಇದ್ದಿದ್ದರೆ ಯಾಕೆ ಎಲ್ಲರೂ ಕಾಂಗ್ರೆಸ್ ಬಿಟ್ಟು ಹೊರಗೆ ಬರತಾ ಇದ್ದರು? ಎಂದು ಸಚಿವ ಬಿ.ಸಿ.ಪಾಟೀಲ್  ಪ್ರಶ್ನಿಸಿದ್ದಾರೆ.

ಇನ್ನು, ಕಳಪೆ ಬೀಜ ಮಾರಾಟದ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಈ ಪ್ರಕ್ರಿಯೆ ರಾಜ್ಯಾದ್ಯಂತ ನಡೆಯುತ್ತಿದೆ. ಅದಕ್ಕೆ ತಡೆ ಇಲ್ಲ. ರೈತರಿಗೆ ಪರಿಹಾರ ನೀಡಲು ತಾಂತ್ರಿಕ ಸಮಸ್ಯೆ ಇದ್ದು,  ಎರಡು ಮೂರು ದಿನಗಳಲ್ಲಿ ಸರಿಯಾಗಲಿದೆ‌ ಎಂದು ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ