ಹೈದರಾಬಾದ್‌ನ ರಾಮೇಶ್ವರ ಕೆಫೆಯಲ್ಲಿ ಅವಧಿ ಮೀರಿದ ಆಹಾರ ಪೊರೈಕೆ

sampriya

ಶುಕ್ರವಾರ, 24 ಮೇ 2024 (18:45 IST)
Photo By X
ಬೆಂಗಳೂರು:  ಹೈದರಾಬಾದ್‌ನಲ್ಲಿ ರಾಮೇಶ್ವರ ಕೆಫೆ ಮೇಲೆ ಹೈದರಾಬಾದ್‌ ಆಹಾರ ಸುರಕ್ಷತಾ ಪ್ರಾಧಿಕಾರ ದಾಳಿ ನಡೆಸಿದೆ.  ಬೆಂಗಳೂರಿನಲ್ಲಿ ಆರಂಭವಾದ ರಾಮೇಶ್ವರ ಕೆಫೆ ಇಂದು ದೇಶದಾದ್ಯಂತ ಹೆಸರು ಗಳಿಸಿದೆ.  ಈಚೆಗೆ ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಬಾಂಬ್‌ ಸ್ಫೋಟ ಸಂಭವಿಸಿ ಸುದ್ದಿಯಾಗಿತು.

ಇದೀಗ ನಿನ್ನೆ ತೆಲಂಗಾಣ ಆಹಾರ ಸುರಕ್ಷತಾ ಪ್ರಾಧಿಕಾರದ ಅಧಿಕಾರಿಗಳು ರಾಮೇಶ್ವರಂ ಕೆಫೆ ಮೇಲೆ ದಾಳಿ ನಡೆಸಿ ಹಲವು ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ದಾಳಿ ವೇಳೆ ಅವಧಿ ಮೀರಿದ ಆಹಾರವನ್ನು ಪೊರೈಕೆ ಮಾಡುತ್ತಿರುವುದು ಪತ್ತೆಯಾಗಿದೆ. ಆಹಾರ ಸುರಕ್ಷತಾ ಪ್ರಾಧಿಕಾರದ ಪ್ರಕಾರ 16,000 ರೂ. ಮೌಲ್ಯದ 100 ಕೆ.ಜಿ ಉದ್ದಿನ ಬೇಳೆ, 10 ಕೆ.ಜಿ ನಂದಿನಿ ಮೊಸರು ಮತ್ತು 8 ಲೀಟರ್ ಅವಧಿ ಮುಗಿದ ಹಾಲು ಈ ಹೋಟೆಲ್​ನ ಅಡುಗೆಮನೆಯಲ್ಲಿ ಕಂಡುಬಂದಿದೆ.

ರಾಮೇಶ್ವರಂ ಕೆಫೆಯಲ್ಲಿ 450 ಕೆಜಿ ಲೇಬಲ್ ಇಲ್ಲದ ಅಕ್ಕಿ, 20 ಕೆಜಿ ಬಿಳಿ ಲೇಬಿಯಾ ಮತ್ತು 300 ಕೆಜಿ ಬೆಲ್ಲವನ್ನು ವಶಪಡಿಸಿಕೊಳ್ಳಲಾಗಿದೆ. ರಾಮೇಶ್ವರಂ ಕೆಫೆಯಲ್ಲಿ ಆಹಾರ ನಿರ್ವಹಣೆ ಮಾಡುವವರಿಗೆ ಆರೋಗ್ಯ ಪ್ರಮಾಣಪತ್ರಗಳನ್ನು ನೀಡದಿರುವುದು ಮತ್ತು ಡಸ್ಟ್‌ಬಿನ್‌ಗಳನ್ನು ಮುಚ್ಚದಿರುವುದು ಈ ವೇಳೆ ಕಂಡುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ