ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿರುವಂತೆ ಮತ್ತೆ ರಾಮ ಜನ್ಮ ಭೂಮಿ ವಿವಾದ ಮುನ್ನೆಲೆ ಚರ್ಚೆಗೆ ಬರುತ್ತಿದೆ. ಇದರ ನಡುವೆ ರಾಮ ಜನ್ಮ ಭೂಮಿ ವಿವಾದ ಕುರಿತಾದ ಚಲನಚಿತ್ರ ಸದ್ದಿಲ್ಲದೇ ತೆರೆಗೆ ಬರಲು ಅಣಿಯಾಗಿದೆ.
ಅಯೋಧ್ಯೆಯಲ್ಲಿ 1990ರಲ್ಲಿ ಮಡಿದ ಕರಸೇವಕರ ಕುರಿತು ಸದ್ದಿಲ್ಲದೇ ಸಿನಿಮಾವೊಂದು ಸಿದ್ಧಗೊಂಡಿದೆ. ಅಂದ್ಹಾಗೆ ಶಿಯಾ ವಕ್ಫ ಮಂಡಳಿ ಅಧ್ಯಕ್ಷ ಸಯ್ಯದ್ ವಾಸೀಮ್ ರಿಜ್ವಿ ಅವರೇ ಈ ಚಿತ್ರವನ್ನು ನಿರ್ಮಿಸಿರುವುದು ವಿಶೇಷ.
ರಿಜ್ವಿ ಅವರೇ ಚಿತ್ರದ ಕಥೆಯನ್ನೂ ಬರೆದಿದ್ದಾರೆ. ಸನೋಜ್ ಮಿಶ್ರಾ ಎಂಬುವರು ಈ ಚಲನಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಡಿಸೆಂಬರ್ ನಲ್ಲಿ ತೆರೆಗೆ ಅಪ್ಪಳಿಸುವುದಕ್ಕೆ ಸಿದ್ಧಗೊಂಡಿರುವ ಈ ಸಿನಿಮಾದಲ್ಲಿ ರಾಮಮಂದಿರ ನಿರ್ಮಾಣದ ಕನಸನ್ನು ಕಣ್ಣಲ್ಲಿ ಇಟ್ಟುಕೊಂಡೇ ಸಾವನ್ನಪ್ಪಿದ ಕರ ಸೇವಕರ ಕುರಿತು ನಿರ್ಮಾಣ ಮಾಡಲಾಗಿದೆ.
ಟ್ರೈಲರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.