ಸಚಿವರ ಭೇಟಿ ಬಳಿಕ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೊತೆ ಸುರ್ಜೇವಾಲ ಮೀಟಿಂಗ್
ಸಚಿವರುಗಳ ಜೊತೆ ರಣದೀಪ್ ಸುರ್ಜೇವಾಲ ಮೂರು ದಿನ ಮೀಟಿಂಗ್ ನಡೆಸಿದ್ದರು. ಈ ವೇಳೆ ಸಾಕಷ್ಟು ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು. ಇನ್ನು ಕೆಲವು ಶಾಸಕರೇ ಸಚಿವರ ಮೇಲೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ರಣದೀಪ್ ಸುರ್ಜೇವಾಲ ಎಲ್ಲರ ಅಭಿಪ್ರಾಯವನ್ನೂ ಸಂಗ್ರಹಿಸಿದ್ದಾರೆ.
ಇದೀಗ ಸಿಎಂ ಮತ್ತು ಡಿಸಿಎಂ ಜೊತೆ ಸಭೆ ನಡೆಸಿ ಶಾಸಕರು, ಸಚಿವರು ಹೇಳಿರುವ ಅಸಮಾಧಾನಗಳ ಪಟ್ಟಿಯನ್ನು ಬಗೆಹರಿಸುವ ಹೊಣೆ ನೀಡಿದ್ದಾರೆ. ರಾಜ್ಯದ ನಾಯಕರ ಅಸಮಾಧಾನ ಪರಹರಿಸುವ ಹೊಣೆ ಈಗ ಸಿಎಂ, ಡಿಸಿಎಂ ಹೆಗಲಿಗೇರಿದೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಜವಾಬ್ಧಾರಿ ಇಬ್ಬರಿಗೂ ವಹಿಸಲಾಗಿದೆ.
ವಿಶೇಷವಾಗಿ ಶಾಸಕರು ಅನುದಾನ ಸಿಗುತ್ತಿಲ್ಲ ಎಂದು ದೂರಿದ್ದರು. ಇದೀಗ ಶಾಸಕರ ಬೇಡಿಕೆಗಳನ್ನು ಈಡೇರಿಸುವಂತೆ ರಣದೀಪ್ ಸುರ್ಜೇವಾಲ ಸಿಎಂ ಮತ್ತು ಡಿಸಿಎಂಗೆ ಆದೇಶ ನೀಡಿದ್ದಾರೆ.