ರಥೋತ್ಸವ ವೇಳೆ ದುರಂತ: ರಥ ಬಿದ್ದು ಇಬ್ಬರು ಭಕ್ತರ ಸಾವು
ಕಾಳಿಯಮ್ಮ ರಥೋತ್ಸವದ ವೇಳೆ ರಥದ ಚಕ್ರ ತುಂಡಾಗಿ ಭಕ್ತರ ಮೇಲೆ ಇಬ್ಬರು ಭಕ್ತರು ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿರುವ ಆಘಾತಕಾರಿ ಘಟನೆ ಬೆಂಗಳೂರು ಹೊರವಲಯದ ಆನೆಕಲ್ ಬಳಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಮಿಳುನಾಡು ಗಡಿ ಭಾಗದ ಮಾದೇನಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ.
ಘಟನೆಯಲ್ಲಿ ಮಾದೇನಹಳ್ಳಿಯ ಮನೋಹರ್ ಮತ್ತು ಶರವಣನ್ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಿವರ್ಷದಂತೆ ಈ ಬಾರಿ ಕಾಳಿಯಮ್ಮ ರಥೋತ್ಸವ ನಡೆಯುತ್ತಿದ್ದಾಗ ರಥವನ್ನು ಎಳೆಯುತ್ತಿದ್ದಾಗ ರಥದ ಚಕ್ರ ತುಂಡಾಗಿ ಭಕ್ತರ ಮೇಲೆ ಬಿದ್ದಿದೆ. ಈ ದಿಢೀರ್ ಘಟನೆಯಿಂದ ಜನರು ಆತಂಕಕ್ಕೀಡಾಗಿದ್ದಾರೆ.
ಈ ಜಾತ್ರೆಯಲ್ಲಿ ಸುಮಾರು ಸುತ್ತಮುತ್ತಲ ಗ್ರಾಮಗಳಿಂದ ಸುಮಾರು 18 ಸಾವಿರ ಭಕ್ತರು ನೆರೆದಿದ್ದರು. ಪಾಪರಪಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.