ಆನ್‌ಲೈನ್ ವಾಹನ ಸೇವೆಗೆ ಅಧಿಕಾರಿಗಳ ವಿರೋಧ ಯಾಕೆ?

ಬುಧವಾರ, 15 ಜೂನ್ 2022 (10:07 IST)
ಬೆಂಗಳೂರು : ರಾಜ್ಯದ ಸಾರಿಗೆ ಇಲಾಖೆ ಅಧಿಕಾರಿಗಳು ಆನ್ಲೈನ್ ಸೇವೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು ಪರಿಣಾಮ  ಆನ್ಲೈನ್ ಸೇವೆ ನೀಡುತ್ತಿದ್ದ ವಾಹನ್ ಪೋರ್ಟಲ್ನಲ್ಲಿ 1.7 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ.
 
ವಾಹನ್ ಪೋರ್ಟಲ್ ಯಾವುದೇ ನೇರ ಸಂಪರ್ಕವಿಲ್ಲದೆಯೇ  15 ವಾಹನ ಸಂಬಂಧಿತ ಸೇವೆಗಳನ್ನು ನೀಡುತ್ತದೆ. ಅರ್ಜಿಗಳಲ್ಲಿ ಮೋಟಾರು ವಾಹನ ತೆರಿಗೆ ಪಾವತಿ, ನೋಂದಣಿ ಪ್ರಮಾಣಪತ್ರ (ಆರ್ಸಿ) ಸರೆಂಡರ್ ಅಥವಾ ಅಮಾನತು,

ಫಿಟ್ನೆಸ್ ತಪಾಸಣೆ ಅಥವಾ ಪ್ರಮಾಣಪತ್ರ, ನಕಲಿ ಆರ್ಸಿ ನೀಡಿಕೆ, ಆರ್ಸಿಯಲ್ಲಿ ವಿಳಾಸ ಬದಲಾವಣೆ, ಮಾಲೀಕತ್ವದ ವರ್ಗಾವಣೆ, ಹೈಪೋಥೆಕೇಶನ್ ಸೇರ್ಪಡೆ, ಹೈಪೋಥೆಕೇಶನ್ ಮುಕ್ತಾಯ, ಎನ್ಒಸಿ ನೀಡಿಕೆ, ನಾಮಿನಿಗಳ ಸೇರ್ಪಡೆ ಅಥವಾ ಮಾರ್ಪಾಡು,

ಆರ್ಸಿ ವಿವರಗಳು, ನಕಲಿ ಎಫ್ಸಿ, ನೋಂದಣಿ ನವೀಕರಣ, ಮೋಟಾರು ವಾಹನದ ಬದಲಾವಣೆ ಮತ್ತು ವಾಹನ ಪರವಾನಗಿಯ ಮರು ಹಂಚಿಕೆ ಮುಂತಾದ ಸೇವೆಗಳನ್ನು ಆರ್ಟಿಒ ಕಚೇರಿಗೆ ತೆರಳದೇ ನೇರವಾಗಿ ಆನ್ಲೈನ್ ಮೂಲಕ ವಾಹನ್ ಪೋರ್ಟಲ್ನಲ್ಲಿ ಪಡೆಯಬಹುದಿತ್ತು.

7,323 ಅರ್ಜಿಗಳೊಂದಿಗೆ ಕಸ್ತೂರಿನಗರದ ಬೆಂಗಳೂರು ಪೂರ್ವ ಆರ್ಟಿಒ (ಹಿಂದೆ ಇಂದಿರಾನಗರ) ಅಗ್ರಸ್ಥಾನದಲ್ಲಿದೆ. ಇದಾದ ಬಳಿಕ ಎಲೆಕ್ಟ್ರಾನಿಕ್ಸ್ ಸಿಟಿ ಆರ್ಟಿಒ (7,212), ಕಲಬುರಗಿ (6,780), ರಾಯಚೂರು (6,262), ಮಂಗಳೂರು (6,062), ಬೆಂಗಳೂರು ಸೆಂಟ್ರಲ್ ಕೋರಮಂಗಲದಲ್ಲಿ (5,683) ), ದಾವಣಗೆರೆ (5,650) ಮತ್ತು ಕೊಪ್ಪಳ (5,416) ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ