ಬೆಂಗಳೂರು: ಪಡಿತರ ಚೀಟಿ ಹೊಂದಿರುವವರು ಡಿಸೆಂಬರ್ 31 ರೊಳಗಾಗಿ ಈ ಒಂದು ಕೆಲಸ ಮಾಡಲೇಬೇಕು. ಇಲ್ಲದೇ ಹೋದರೆ ನಿಮ್ಮ ಪಡಿತರ ಚೀಟಿಯೇ ರದ್ದಾಗುವ ಅಪಾಯವಿದೆ. ಅದೇನು ಇಲ್ಲಿದೆ ವಿವರ.
ಪಡಿತರ ಚೀಟಿಗೆ ಸಂಬಂಧಪಟ್ಟಂತೆ ಕೇಂದ್ರ, ರಾಜ್ಯ ಸರ್ಕಾರಗಳು ಈಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಪಡಿತರ ಚೀಟಿ ಹೊಂದಿರುವವರು ತಮ್ಮ ಕುಟುಂಬ ಸದಸ್ಯರ ಬೆರಳಚ್ಚು ನೀಡುವ ಮೂಲಕ ಇಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇದಕ್ಕೆ ಡಿಸೆಂಬರ್ 31 ರ ಗಡುವು ನೀಡಲಾಗಿದೆ. ಇದನ್ನು ಮಾಡದೇ ಹೋದರೆ ನಿಮ್ಮ ಪಡಿತರ ರದ್ದಾಗುವ ಅಪಾಯವಿದೆ.
ಇನ್ನು ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವವರೂ ತಕ್ಷಣವೇ ತಮ್ಮ ವ್ಯಾಪ್ತಿಯ ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ಕಾರ್ಡ್ ಹಿಂತಿರುಗಿಸಬೇಕಾಗುತ್ತದೆ. ಅಲ್ಲದೆ ಕಳೆದ ಆರು ತಿಂಗಳಿನಿಂದ ರೇಷನ್ ಪಡೆಯದೇ ಇರುವವರ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸುವಂತೆಯೂ ಕೇಂದ್ರ ಆಹಾರ ಇಲಾಖೆ ಸೂಚನೆ ನೀಡಿದೆ.
ಪಡಿತರ ಚೀಟಿ ಹೊಂದಿರುವವರು ತಮ್ಮ ಗುರುತ ನೋಂದಣಿ ಅಥವಾ ಮರುನೋಂದಣಿ ಮಾಡಿಸದೇ ಇದ್ದಲ್ಲಿದೆ ಡಿಸೆಂಬರ್ 31 ರೊಳಗಾಗಿ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ಬೆರಳಚ್ಚು ನೀಡಿ ಇಕೆವೈಸಿ ಕಾರ್ಯ ಮಾಡಿಸಿಕೊಳ್ಳಬೇಕು. ಇಕೆವೈಸಿ ಮಾಡಿಸಿಕೊಳ್ಳದ ಗ್ರಾಹಕರಿಗೆ ಪಡಿತರ ಬಂದ್ ಆಗಲಿದೆ.