ಸಿಸಿಬಿ ವಶದಲ್ಲಿದ್ದರೂ ಸುನಿಲ್ ಗೆ ಧಮ್ಕಿ ನೀಡಿದ್ದಾರಂತೆ ರವಿ ಬೆಳಗೆರೆ

ಸೋಮವಾರ, 11 ಡಿಸೆಂಬರ್ 2017 (07:55 IST)
ಬೆಂಗಳೂರು: ಸುನಿಲ್ ಹೆಗ್ಗರವಳ್ಳಿಗೆ ರವಿಬೆಳಗರೆ ಬೆದರಿಕೆ ಕರೆ ಹಾಕಿರುವ ಆರೋಪ, ಇಂದು ಬೆಳಿಗ್ಗೆ ಸುಬ್ರಹ್ಮಣ್ಯಪುರ ಠಾಣೆಗೆ ಸುನಿಲ್ ದೂರು ನೀಡಲು ನಿರ್ಧಾರ ಮಾಡಿದ್ದಾರೆ.


‘ರಾತ್ರಿ 9.40ರ ಸುಮಾರಿಗೆ ನನ್ನ ಪೋನ್ ಗೆ ಕರೆ ಬಂದಿತ್ತು ಒಂದು ನಿಮಿಷ ರವಿ ಅಣ್ಣಾ ಮಾತನಾಡುತ್ತಾರೆ ಎಂದು ಮಧು ರವಿ ಬೆಳಗೆರೆಗೆ ಫೋನ್ ನೀಡಿದ್ದಾರೆ. ಮಧು ನನಗೂ, ರವಿ ಬೆಳಗರೆಗೂ ಪರಿಚಯ. ಹಾಯ್ ಬೆಂಗಳೂರು ಪತ್ರಿಕಾ ಕಚೇರಿಕೆ ಬರುತ್ತಿದ್ದ. ಫೋನ್ ನಲ್ಲಿ ಮಾತನಾಡಿದ ರವಿ ಬೆಳಗೆರೆ, ‘‘ನನ್ನ ಧ್ವನಿ ಕೇಳುತ್ತಿದೆಯಾ ಎಂದು ಪ್ರಶ್ನಿಸಿದರು, ಯಶೋಮತಿಯ ಜತೆ ಸಂಬಂಧವಿದೆ ಎಂದು ಹೇಳಿದ್ದಿಯಾ ಎಂದು ದರ್ಪದಿಂದ ಕೇಳಿದರು’’. ಸಿಸಿಬಿ ವಶದಲ್ಲಿದ್ದರೂ ನಿನ್ನ ಜತೆ ಮಾತನಾಡಬಲ್ಲೆ, ಜಾಮೀನಿನ ಮೂಲಕ ಹೊರಬಂದರೆ ನಿನ್ನನ್ನು ಬಿಡುವುದಿಲ್ಲ ಎಂಬಂತಹ  ಸಂದೇಶವನ್ನು ರವಾನಿಸಿದ್ದಾರೆ ರವಿ ಬೆಳಗೆರೆ. ಸಿಸಿಬಿ ವಶದಲ್ಲಿರುವಾಗಲೇ ಪೋನ್ ಮಾಡಿದ್ದು ಎಷ್ಟು ಸರಿ’?


ಕೊಲೆ ಬೆದರಿಕೆ ಹಿನ್ನೆಲೆ ರಕ್ಷಣೆ ನೀಡುವಂತೆ ನಗರ ಪೊಲೀಸ್ ಆಯುಕ್ತರಿಗೆ ಸುನಿಲ್ ಮನವಿ ಸಲ್ಲಿಸಲಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ರವಿ ಬೆಳಗೆರೆ ಕರೆ ಆರೋಪದಡಿಯಲ್ಲಿ ದೂರ ನೀಡಲಿದ್ದಾರೆ ಸುನಿಲ್.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ