ರಿಯಾಲಿಟಿ ಶೋ ಸ್ಟಾರ್ ತಾಪಸ್ಯ ರಜತ್ ರಿಂದ ಅಂಗಡಿಯಲ್ಲಿ ರಂಪಾಟ

ಸೋಮವಾರ, 1 ಮಾರ್ಚ್ 2021 (09:38 IST)
ಬೆಂಗಳೂರು: ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಮೂಲಕ ಜನಪ್ರಿಯರಾಗಿದ್ದ ರಜತ್ ಕಿಶನ್ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಅಂಗಡಿಯೊಂದರ ಮಾಲಿಕರ ಜೊತೆ ಕಿತ್ತಾಟ ನಡೆಸಿದ ಘಟನೆ ವರದಿಯಾಗಿದೆ.


ಈ ಸಂಬಂಧ ಬಸವೇಶ್ವರ ನಗರದ ಅಂಗಡಿ ಮಾಲಿಕ ಕಿರಣ್ ರಾಜ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ರಜತ್ ತಮ್ಮ ಅಂಗಡಿ ಮುಂದೆಯೇ ಕಾರು ಪಾರ್ಕ್ ಮಾಡಿದ್ದರು. ಇದರಿಂದ ತಮಗೆ ವ್ಯಾಪಾರಕ್ಕೆ ತೊಂದರೆಯಾಗುತ್ತದೆಂದು ಬೇರೆಡೆ ಪಾರ್ಕ್ ಮಾಡುವಂತೆ ಕಿರಣ್ ಹೇಳಿದ್ದಾರೆ. ಈ ವೇಳೆ ಐದು ನಿಮಿಷದಲ್ಲಿ ಕಾರು ತೆಗೆಯವುದಾಗಿ ಹೇಳಿದ ರಜತ್ ಅರ್ಧಗಂಟೆಯಾದರೂ ತೆಗೆಯಲಿಲ್ಲ. ಆಗ ಮತ್ತೆ ಕಿರಣ್ ಕಾರು ತೆಗೆಯಲು ಹೇಳಿದ್ದಾರೆ. ಆಗ ಆಕ್ರೋಶಗೊಂಡ ರಜತ್ ರಂಪಾಟ ನಡೆಸಿದ್ದಾರೆ. ಅಂಗಡಿಯ ವಸ್ತುಗಳಿಗೆ ಹಾನಿ ಮಾಡಿದ್ದಲ್ಲದೆ, ಮಾಲಿಕ ಕಿರಣ್, ಆತನ ಸಹಾಯಕ್ಕೆ ಬಂದ ಪೋಷಕರ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಇದೀಗ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ