ಕಾವೇರಿ ನೀರಿನ ದರ ಏರಿಸುವಂತೆ BWSSB ಪ್ರಸ್ತಾಪ

ಗುರುವಾರ, 8 ಜೂನ್ 2023 (18:34 IST)
ರಾಜಧಾನಿ ಜನರಿಗೆ ಶಾಕ್ ಮೇಲೆ ಶಾಕ್ ಕಾಡ್ತಾನೇ ಇದೆ. ಶ್ರೀಸಾಮಾನ್ಯ, ಮಧ್ಯಮ ವರ್ಗದ ಜನರಂತೂ ಈ ದುನಿಯಾದಲ್ಲಿ ಜೀವನ ಮಾಡೋಕೆ ಆಗ್ತಾ ಇಲ್ಲ. ಎಲ್ಲವೂ ತುಂಬಾನೇ ಕಾಸ್ಟ್ಲಿ.. ಸರ್ಕಾರಿ ಇಲಾಖೆಗಳಂತೂ ನಷ್ಟದ ನೆಪವೊಡ್ಡಿ ಕರೆಂಟ್ ದರ, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನ ಏರಿಕೆ ಮಾಡ್ತಾನೇ ಬಂದಿದೆ. ಆದ್ರೆ ಈಗ ಬೆಂಗಳೂರು ಜಲಮಂಡಳಿಯ ಸರದಿ. ಎಸ್ಕಾಂಗಳಂತೆ ಬೆಂಗಳೂರು ಜಲಮಂಡಳಿಗೂ  ನೀರಿದ ದರ ಏರಿಕೆಗೆ ಅನುಮತಿ ನೀಡುವಂತೆ ಸರ್ಕಾರದ ಬಳಿ ಮನವಿ ಮಾಡಿಕೊಂಡಿದೆ. ಜಲಮಂಡಳಿ ಈ ಹಿಂದೆ 2014ರಲ್ಲಿ ನೀರಿನ ದರವನ್ನ ಏರಿಸಿತ್ತು. ಅದಕ್ಕೂ ಮುನ್ನ 2009ರಲ್ಲಿ ನೀರಿನ ದರ ಏರಿಕೆಯ ಶಾಕ್ ಅನ್ನ ನೀಡಿತ್ತು. ಆಗೊಮ್ಮೆ ಹೀಗೊಮ್ಮ ದರ ಏರಿಸಿದ್ರೆ, ಹೊಸ ಯೋಜನೆಗಳು ಕೈಗೊಳ್ಳುವುದು ಕಷ್ಟ. ಆಡಳಿತ ನಿರ್ವಹಣೆ ವೆಚ್ಚಗಳನ್ನು ಸರಿದೂಗಿಸಲು ಸವಾಲು ಹೀಗಾಗಿ ನೀರಿನ ದರ  ನೀರಿದ ದರ ಹೆಚ್ಚಳಕ್ಕೆ ಅವಕಾಶ ಕೊಡಿ ಅಂತ ಬೆಂಗಳೂರು ಜಲಮಂಡಳಿ ಸರ್ಕಾರದ ಬಳಿ ವಾದ ಮಂಡಿಸುತ್ತಿದೆ.

ಮಂಡಳಿಯ ತಿಂಗಳ ಆದಾಯ ಸುಮಾರು 110 ಕೋಟಿ ರೂ. ಇದೆ. ನೀರು ಪಂಪ್ ಮಾಡಲು ಜಲಮಂಡಳಿ 70 ಕೋಟಿ ವಿದ್ಯುತ್ ಶುಲ್ಕ ಭರಿಸುತ್ತೆ. ಸಿಬ್ಬಂದಿ ವೇತನ, ದುರಸ್ಥಿ, ಪೈಪ್ ಗಳ ಬದಲಾವಣೆ, ಹೊಸ ಯೋಜನೆ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ಉಳಿದ ಮೊತ್ತ ಸಾಲುವುದಿಲ್ಲ. 1998ರ ಸಂದರ್ಭದಲ್ಲಿ ತಿಂಗಳಿಗೆ 3 ಕೋಟಿ ಕರೆಂಟ್ ಬಿಲ್ ಬರ್ತಾ ಇತ್ತು. ಆದ್ರೀಗ ಸರಿಸುಮಾರು 70 ಕೋಟಿ. ರೂ ದಾಟಿದೆ. ಪ್ರತಿ ವರ್ಷ ವಿದ್ಯುತ್ ಬಿಲ್ ಜಾಸ್ತಿ ಆಗ್ತಿದೆ. ಅದಕ್ಕೆ ತಕ್ಕಂತೆ, ನೀರಿನ ದರ ಕೂಡ ಪರಿಷ್ಕರಣೆ ಆಗಬೇಕಿದೆ. ಹೀಗಾಗಿ ಈ ಬಾರಿ ನೀರಿದ ದರ ಹೆಚ್ಚಳಕ್ಕೆ ಬೆಂಗಳೂರು ಜಲಮಂಡಳಿ ಸರ್ಕಾರ ಮೊರೆ ಹೋಗಿದೆ.ಒಟ್ನಲ್ಲಿ ದರ ಏರಿಕೆ ಬರೆಯಿಂದ ತತ್ತರಿಸಿ ಹೋಗಿರುವ ಸಿಲಿಕಾನ್ ಸಿಟಿಯ ಜನರಿಗೆ ವಿದ್ಯುತ್ ಬಿಲ್, ಹಾಲಿನ ದರ ಹೆಚ್ಚಳದ ಜೊತೆಗೆ ನೀರಿನ ಬಿಲ್ ಸಹ ಹೊರೆಯಾಗಲಿದ್ದು, ಕಟ್ಟೋಕೆ ರೆಡಿಯಾಗಬೇಕಿದೆ. ಆದ್ರೆ,ಬಿಬಿಎಂಪಿ ಚುನಾವಣೆ ಇರುವ ಹಿನ್ನೆಲೆ ಸರ್ಕಾರ ಜಲಮಂಡಳಿಯ ಪ್ರಸ್ತಾಪಕ್ಕೆ ಅಸ್ತು ಅನ್ನುತ್ತೊ ಅಥವಾ ತಡೆ ಹಿಡಿಯುತ್ತೊ ಅಂತ ಕಾದು ನೋಡ್ಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ