ಸಂಭೋಗ ವೇಳೆ ತೀವ್ರ ನೋವಾಗುವುದರಿಂದ ಲೈಂಗಿಕ ಸಂಬಂಧ ಮಾಡಲಾಗುತ್ತಿಲ್ಲ

ಮಂಗಳವಾರ, 2 ಏಪ್ರಿಲ್ 2019 (06:21 IST)
ಬೆಂಗಳೂರು :  ನನಗೆ 31 ವರ್ಷ. ವರ್ಷದ ಹಿಂದೆ ಮದುವೆಯಾಗಿದ್ದೇನೆ. ಸಂಭೋಗ ವೇಳೆ ತೀವ್ರ ನೋವು ಅನುಭವಿಸುತ್ತಿರುವುದರಿಂದ ಪತಿ ಜತೆಗೆ ಲೈಂಗಿಕ ಸಂಬಂಧವನ್ನೇ ಬಿಟ್ಟಿದ್ದೇನೆ. ನಾವು ಪ್ರೀತಿ ಪ್ರೇಮಕ್ಕೊಳಗಾದಾಗ ನನ್ನ ಹೊಟ್ಟೆಯ ಕೆಳಗಿನ ಭಾಗ ಗಟ್ಟಿಯಾದ ಅನುಭವವಾಗುತ್ತದೆ. ಹಾಗಾಗಿ ಕಾಮಕೇಳಿಗೂ ನಾನು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಆನ್ ಲೈನ್ ನಲ್ಲಿ ಚೆಕ್ ಮಾಡಿದಾಗ ಇದೊಂದು ಯೋನಿಸಂಕೋಚನ ಸಮಸ್ಯೆ ಎಂದು ತಿಳಿದುಕೊಂಡೆ. ನನಗೂ ಈ ಸಮಸ್ಯೆ ಕಾಡುತ್ತಿದೆಯೇ ಎಂಬ ಭೀತಿ ಕಾಡುತ್ತಿದೆ. ನಾನು ಸ್ತ್ರೀರೋಗ ತಜ್ಞರನ್ನು ಕಂಡು ಪರಿಹಾರ ಕೇಳಲು ಭಯಪಡುತ್ತಿದ್ದೇನೆ. ಈ ಭಯದಿಂದ ಹೊರಬರುವುದು ಹೇಗೆ ಮತ್ತು ಲೈಂಗಿಕ ಜೀವನ ಸುಧಾರಿಸುವುದು ಹೇಗೆ ?


ಉತ್ತರ: ನಿಮಗೇನು ಭಯ ? ಕೆಲವು ನಿಮಿಷಗಳಲ್ಲಿ ನೋವು ಕಡಿಮೆಯಾಗುತ್ತದೆ. ನಿಮಗೆ ಋತುಸ್ರಾವವಾದಾಗ ಆದಷ್ಟು ದೀರ್ಘಕಾಲ ಈ ನೋವು ಇರುವುದಿಲ್ಲ. ಭಯಪಡುವ ಕಾರಣದಿಂದ ಶಿಶ್ನ ಹಾಯುವ ಯೋನಿಯೊಳಗೆ ಪ್ರವೇಶಿಸಿದಾಗ ಸ್ನಾಯು ಸಂಕೋಚನವಾಗುತ್ತದೆ. ಇದನ್ನು ಯೋನಿಸಂಕೋಚನ ಎಂದು ಕರೆಯಲಾಗುತ್ತದೆ. ಸ್ತ್ರೀರೋಗ ತಜ್ಞರನ್ನು ಕಂಡು ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಿ. ಅವರು ಪರಿಹಾರ ನೀಡುತ್ತಾರೆ. ಸೂಕ್ತ ಔಷಧೋಪಚಾರದಿಂದ ನಿಮ್ಮ ನೋವನ್ನು ಕಡಿಮೆ ಮಾಡಲು ಸಾಧ್ಯವಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ