ಕಲ್ಲುಸಕ್ಕರೆ ತಿಂದರೆ ಏನಾಗುತ್ತದೆ ಗೊತ್ತಾ?

ಮಂಗಳವಾರ, 26 ಮಾರ್ಚ್ 2019 (10:23 IST)
ಬೆಂಗಳೂರು : ಕಲ್ಲುಸಕ್ಕರೆ ತಿನ್ನಲು ಎಷ್ಟು ಸಿಹಿಯಾಗಿದೆಯೋ ಆರೋಗ್ಯಕ್ಕೂ ಕೂಡ ಅಷ್ಟೇ ಉತ್ತಮ. ಇದರಲ್ಲಿ ಅನೇಕ ಆರೋಗ್ಯಕರ ಅಂಶಗಳು ಅಡಗಿರುತ್ತದೆ. ಅನೇಕ ರೋಗಗಳಿಗೆ ಇದು ರಾಮಾಬಾಣವಾಗಿದೆ.


ಕಲ್ಲುಸಕ್ಕರೆಯ ಸೇವೆನೆಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಹಿಮೋಗ್ಲೋಬಿನ್​ನ್ನು ಹೆಚ್ಚಿಸಿ ರಕ್ತಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಗಂಟಲು ನೋವಿದ್ದರೂ ಕಲ್ಲುಸಕ್ಕರೆಯನ್ನು ತಿನ್ನುವುದರಿಂದ ತಕ್ಷಣ ಪರಿಹಾರ ಕಾಣಬಹುದು.
ಹಾಗೆಯೇ ಕೆಮ್ಮಿನ ಸಮಸ್ಯೆಗೆ ಕಲ್ಲುಸಕ್ಕರೆಯೇ ರಾಮಬಾಣವಾಗಿದೆ. ಒಣಕೆಮ್ಮು ಮತ್ತು ಹಸಿಕೆಮ್ಮಿನ ಸಮಸ್ಯೆಗಳಿಗೆ ಪರಿಹಾರವಾಗಿ ಕಲ್ಲುಸಕ್ಕರೆಯನ್ನು ತಿನ್ನುವುದು ಉತ್ತಮ. ಎಲ್ಲ ರೀತಿಯ ಕೆಮ್ಮುಗಳಿಗೆ ಮತ್ತು ಗಂಟಲು ನೋವಿಗೆ ಕಲ್ಲುಸಕ್ಕರೆ ರಾಮಬಾಣ ಎಂದು ಪೋಸ್ಟ್​ ಗ್ರಾಜುಯೇಟ್​ ಮೆಡಿಕಲ್ ಜರ್ನಲ್​ನ ಅಧ್ಯಯನದಲ್ಲಿ ತಿಳಿಸಲಾಗಿದೆ.


ರಾತ್ರಿ ಮಲಗುವ ವೇಳೆ ಕಲ್ಲುಸಕ್ಕರೆಯನ್ನು ಕರಿಮೆಣಸಿನ ಪುಡಿಯೊಂದಿಗೆ ಮಿಶ್ರಣ ಮಾಡಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಕಲ್ಲುಸಕ್ಕರೆಯನ್ನು ತಿಂದ ಬಳಿಕ ನೀರು ಕುಡಿಯುವುದರಿಂದ ಕೆಮ್ಮು ಹೆಚ್ಚಾಗಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ