ಸಚಿವ ಸವದಿಗೆ ಟಾಂಗ್ ಕೊಟ್ಟ ರೇಣುಕಾಚಾರ್ಯ; ಬಿಎಸ್ವೈಗೂ ಹೀಗೇ ಹೇಳೋದಾ

ಶನಿವಾರ, 24 ಆಗಸ್ಟ್ 2019 (17:26 IST)
ಚುನಾವಣೆಯಲ್ಲಿ ಸೋತವರು, ಸಂಕಷ್ಟದಲ್ಲಿ ಸಾಥ್ ಕೊಡದವರು, ಸಚಿವರಾಗಿ ನೀತಿ‌ ಪಾಠ ಹೇಳುತ್ತಿದ್ದಾರೆ.

ಆ ನೀತಿ ಪಾಠ ಹೇಳುವ ಅವಶ್ಯಕತೆ ಇಲ್ಲ. ಕೇಳುವ ಅಗತ್ಯ ನನಗಿಲ್ಲ. ಹೀಗಂಗ ಸಚಿವ ಲಕ್ಷ್ಮಣ್ ಸವದಿಗೆ ಶಾಸಕ ರೇಣುಕಾಚಾರ್ಯ ಪರೋಕ್ಷ ಟಾಂಗ್ ನೀಡಿದ್ದಾರೆ.

ಮಾಜಿ ಶಾಸಕ ಲಕ್ಷ್ಮಣ್ ಸವದಿಗೆ ಮಂತ್ರಿ ಸ್ಥಾನ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿರೋ ಅವರು, ನಾನು‌ ಇದ್ದದ್ದು ಇದ್ದಂಗೆ ಹೇಳಿದ್ರೆ ಎದ್ಬಂದು ಎದೆಗೆ ಒದ್ದಂರಂತೆ ಹಾಗಯಿತು ಇದು ಅಂತ ಪರೋಕ್ಷವಾಗಿ ವ್ಯಂಗ್ಯವಾಡಿದ್ರು.

ನಾನು ಮಂತ್ರಿಯಾಗಲು  ಬೆಗ್ ಮಾಡೋಲ್ಲ, ಅದರ ಅವಶ್ಯಕತೆ ಇಲ್ಲ. ನಾನು ಬಂಡೆಯಂತೆ ನಾನು ಕರಗಲ್ಲ. 
ಮಣ್ಣಿನ ಹೆಂಟೆ ಹೊಡೆಯುತ್ತೆ, ಬಂಡೆ ಬಂಡೆಯಾಗೆ ಇರುತ್ತದೆ. ದುರಾಹಂಕಾರ ಇಲ್ಲ. ಜನ ಈ ಮಟ್ಟಕ್ಕೆ ಬೆಳೆಸಿದ್ದಾರೆ ಅಂತ ರೇಣುಕಾಚಾರ್ಯ ಹೇಳಿಕೊಂಡಿದ್ದಾರೆ.

ಚಿತ್ರದುರ್ಗದಲ್ಲಿ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ನೀಡಿದ್ದು, ಸಚಿವ ಸ್ಥಾನ ಕೈ ತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಮೇಲಿದ್ದವರು ಕೆಳಗೆ ಬರ್ತಾರೆ. ಕೆಳಗಿದ್ದವರು ಮೇಲೆ ಹೋಗ್ತಾರೆ. ಎಲ್ಲವನ್ನು ಸ್ವೀಕರಿಸುವ ಮನಸ್ಥಿತಿ ಇರಬೇಕು, ಇದೊಂದು ಗೇಮ್ ಅಂತ ಹೇಳೋ ಮೂಲಕ ಯಡಿಯೂರಪ್ಪರ ನಡೆಯನ್ನು ಸಮರ್ಥನೆ ಮಾಡಿಕೊಳ್ಳಲು ಯತ್ನಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ