ಕೋವಿಡ್ ಗೆ ಹಾಸಿಗೆ ಕಾದಿರಿಸುವಂತೆ ಆದೇಶ

ಗುರುವಾರ, 6 ಜನವರಿ 2022 (15:01 IST)
ಕೋವಿಡ್ -19 ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ತಕ್ಷಣವೇ ಹಾಸಿಗೆಗಳ ಖಾತ್ರಿಗಾಗಿ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜ್ ಆಸ್ಪತ್ರೆಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಬುಧವಾರ ಆದೇಶ ಹೊರಡಿಸಿದ್ದಾರೆ.
ಎಲ್ಲಾ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಸೂಚಿಸಿದ ಕೋವಿಡ್ -19 ರೋಗಿಗಳ ಚಿಕಿತ್ಸೆಗಾಗಿ ಐಸಿಯು, ವೆಂಟಿಲೇಟರ್‌ನೊಂದಿಗೆ ಐಸಿಯು, ಎಚ್‌ಡಿಯು / ಆಮ್ಲಜನಕಯುಕ್ತ ಮತ್ತು ಸಾಮಾನ್ಯ ಹಾಸಿಗೆಗಳಲ್ಲಿ ಶೇಕಡಾ 30 ರಷ್ಟು ಹಾಸಿಗೆಗಳನ್ನು ತಕ್ಷಣವೇ ಕಾಯ್ದಿರಿಸಬೇಕು ಮತ್ತು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಸೂಚಿಸಲಾಗಿದೆ.
 
ಜನವರಿ 7 ರೊಳಗೆ ಎಲ್ಲಾ ವರ್ಗಗಳ 50% ಹಾಸಿಗೆಗಳನ್ನು ಮತ್ತು ಜನವರಿ 10 ರೊಳಗೆ 75% ವರೆಗೆ ಹಾಸಿಗೆಗಳನ್ನು ಕಾಯ್ದಿರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
 
ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಉಲ್ಲೇಖಿಸಿದ ಕೋವಿಡ್ -19 ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳು ಪ್ರತಿ ವಿಭಾಗದಲ್ಲಿ ಶೇಕಡಾ 50 ರಷ್ಟು ಹಾಸಿಗೆಗಳನ್ನು ಕಾಯ್ದಿರಿಸುವಂತೆ ತಿಳಿಸಲಾಗಿದೆ. ಜನವರಿ 7 ರೊಳಗೆ ಹಾಸಿಗೆಗಳನ್ನು ಪಡೆಯುವಂತೆ ಚಿತಪಡಿಸಿಕೊಳ್ಳಬೇಕು. ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜಾರಿಗೊಳಿಸಬೇಕು ಎಂದು ಉಲ್ಲೇಖಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ