ಕೊರೋನಾ ಇಫೆಕ್ಟ್: ಬೆಂಗಳೂರಿನಲ್ಲಿ ಐಪಿಎಲ್ ಹರಾಜು ನಡೆಯೋದು ಅನುಮಾನ?
ಬೆಂಗಳೂರಿನಲ್ಲಿ ಈಗ ಕೊರೋನಾ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದೆ. ಹೀಗಾಗಿ ಎರಡು ದಿನಗಳ ಕಾಲ ನಡೆಯಬೇಕಿರುವ ಹರಾಜು ಪ್ರಕ್ರಿಯೆ ಸ್ಥಳಾಂತರವಾಗುವ ಸಾಧ‍್ಯತೆಯಿದೆ ಎನ್ನಲಾಗಿದೆ.
ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ನಿಯಮಾವಳಿ ರೂಪಿಸಿದೆ. ಹೀಗಾಗಿ ಬಿಸಿಸಿಐ ಈಗ ಕಾದು ನೋಡುವ ನೀತಿ ಅನುಸರಿಸಲು ಮುಂದಾಗಿದೆ ಎನ್ನಲಾಗಿದೆ. ಇದರೊಂದಿಗೆ ಐಪಿಎಲ್ 2022 ಕ್ಕೆ ಆರಂಭದಲ್ಲೇ ವಿಘ್ನ ಎದುರಾದಂತಾಗಿದೆ.