ನಾಳೆ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆ ವರೆಗೆ ವೀಕೆಂಡ್ ಕರ್ಫ್ಯೂ ಜಾರಿ ಇರುತ್ತದೆ.
ಹೀಗಾಗಿ ಆಭರಣ ಕೊಳ್ಳುವವರು ಇಂದೇ ಖರೀದಿಸಬೇಕು. ಆಭರಣ ಪ್ರಿಯರಿಗೆ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರ ನೋಡುವ ಅಭ್ಯಾಸ ಇರುತ್ತದೆ.
ಅದರಲ್ಲೂ ಸದ್ಯ ಕೊರೊನಾ ಕಾರಣದಿಂದ ಆಭರಣದ ಬೆಲೆ ಕಡಿಮೆಯಾಗಿದೆಯಾ ಎಂಬ ಕುತೂಹಲ ಕೂಡಾ ಇರುತ್ತದೆ. ಇಂದು (ಜ.6) ಆಭರಣದ ಬೆಲೆ ಎಷ್ಟಿದೆ? ನಿನ್ನೆಗಿಂತ ದರ ಏರಿಕೆಯಾಗಿದೆಯಾ? ಅಥವಾ ಇಳಿಕೆಯಾಗಿದೆಯಾ? ಅಂತ ಇಲ್ಲಿ ತಿಳಿಸಿದ್ದೇವೆ ಗಮನಿಸಿ.
ಇಂದು ಚಿನ್ನದ ದರದಲ್ಲಿ ಏರಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 45,150 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,51,500 ರೂ. ನಿಗದಿಯಾಗಿದೆ. ನಿನ್ನೆ 22 ಕ್ಯಾರೆಟ್ 10 ಗ್ರಾಂಗೆ 44,900 ರೂಪಾಯಿ ಇತ್ತು. ನಿನ್ನೆ ದರ ಗಮನಿಸಿದಾಗ 10 ಗ್ರಾಂ ಗೆ ಇಂದು ಸುಮಾರು 250 ರೂಪಾಯಿ ಹೆಚ್ಚಾಗಿದೆ.
ಇನ್ನು 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಇಂದು 49,250 ರೂ. ಮತ್ತು 100 ಗ್ರಾಂಗೆ 4,92,500 ರೂಪಾಯಿ ದರ ನಿಗದಿಯಾಗಿದೆ. ನಿನ್ನೆ ಇದೇ ಚಿನ್ನ 10 ಗ್ರಾಂಗೆ 48,990 ರೂಪಾಯಿ ಇತ್ತು.
ಇಂದು 24 ಕ್ಯಾರೆಟ್ ಪ್ರತಿ 10 ಗ್ರಾಂಗೆ ಚಿನ್ನಕ್ಕೆ 260 ರೂಪಾಯಿ ಏರಿಕೆಯಾಗಿದೆ. ಬೆಳ್ಳಿ ಖರೀದಿಸುವವರಿಗೂ ಶಾಕ್ ಎದುರಾಗಿದ್ದು, 1 ಕೆಜಿ ಬೆಳ್ಳಿಗೆ 600 ರೂ. ಹೆಚ್ಚಾಗಿದೆ. ಪ್ರತಿ ಒಂದು ಕೆಜಿ ಬೆಳ್ಳಿಗೆ ಇಂದು 62,300 ರೂಪಾಯಿ ಇದೆ.