ಇತರ ಧರ್ಮಗಳನ್ನು ಗೌರವಿಸುವ ಮೂಲಕ ಸಮನ್ವಯವನ್ನು ಸಾಧಿಸಬೇಕಿದೆ. ಸಮಾಜದ ಎಲ್ಲ ವರ್ಗದ ಜನರೊಂದಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಸಮನ್ವಯ ಸಾಧಿಸಿದಾಗ ಮಾತ್ರ ಸಮಾಜದಲ್ಲಿ ಸಮಾನತೆಯ ಭಾವವನ್ನು ತರಲು ಸಾದ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಡಾ. ಎಲ್.ಶಿವಲಿಂಗಯ್ಯ ಅವರ ಮನೆಗೆ ತೆರಳಿ ಹಲವಾರು ಭೇಟಿಯಾಗಿದ್ದೇನೆ. ಅವರು ನಮ್ಮ ತಂದೆಯವರ ಒಡನಾಟ, ಆತ್ಮೀಯತೆ, ರಾಜ್ಯ ಪ್ರಗತಿಪಥದಲ್ಲಿ ನಡೆಯಿತು ಎಂಬ ಬಗ್ಗೆ ಅತ್ಯಂತ ರೋಚಕವಾಗಿ ಹೇಳುತ್ತಿದ್ದರು. ಉನ್ನತ ಚಿಂತನೆಯ ವ್ಯಕ್ತಿತ್ವ ಅವರದು. ಹಲವಾರು ನೀರಾವರಿ ಯೋಜನೆಗಳ ರೂಪುರೇಷೆಗಳನ್ನು ಸಿದ್ಧಪಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕನ್ನಡ ನಾಡಿಗೆ ಅನೇಕ ರೀತಿಯ ಮಹನೀಯರ ಸ್ಮರಣೆ ಮಾಡಿದಾಗ ಮಾತ್ರ ಪ್ರೇರಣೆ ದೊರೆಯುತ್ತದೆ. ಬೆಂಗಳೂರಿನಲ್ಲಿ ವಿಕ್ಟೊರಿಯಾ, ನಿಮಾನ್ಸ್ ಸೇರಿದಂತೆ ಹಲವಾರು ಆಸ್ಪತ್ರೆಗಳ ವಿನ್ಯಾಸ ಹಾಗೂ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂದಿನ ಡಾ.ಬಿ.ಆರ್. ಅಂಬೇಡ್ಕರ್ ಸಂಸ್ಥೆಗಳು ಅವರ ದೂರದೃಷ್ಟಿಯ ಫಲವಾಗಿದೆ. ಅವರ ಹಾದಿಯಲ್ಲಿ ನಡೆದು ಕೆಲಸ ಮಾಡಿದಾಗ ಸಮಾಜಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ ಎಂದರು