ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣ ಸಂಬಂಧ ಜೈಲು ಸೇರಿರುವ ಶಾಸಕ ಎಚ್ ಡಿ ರೇವಣ್ಣ ಅವರನ್ನು ಜೆಡಿಎಸ್ ಮುಖಂಡ ಜಿ ಟಿ ದೇವೇಗೌಡ ಅವರು ಭೇಟಿಯಾಗಿದ್ದಾರೆ.
ರೇವಣ್ಣ ಭೇಟಿ ನಂತರ ಮಾಧ್ಯಮದ ಜತೆ ಮಾತನಾಡಿದ ಜಿ ಟಿ ದೇವೇಗೌಡ ಅವರು, ಏನೂ ತಪ್ಪು ಮಾಡದೇ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಿ, ಜೈಲಿಗೆ ಹಾಕಿದ್ದಾರೆ ಎಂದು ರೇವಣ್ಣ ಕಣ್ಣೀರು ಹಾಕಿದರು.
ಜೈಲಿನಲ್ಲಿ ರೇವಣ್ಣ ಅವರು ಆರಾಮವಾಗಿ ಕುಳಿತಿದ್ದರು. ಭೇಟಿ ವೇಳೆ ಒಟ್ಟಿಗೆ ಚಹಾ ಕುಡಿದು, ಹಳೆ ವಿಚಾರಗಳನ್ನು ಮೆಲುಕು ಹಾಕಿದೆವು. ಇನ್ನೂ ರೇವಣ್ಣ ಅವರು ಜೈಲಿನಲ್ಲಿದ್ದರೂ ಅವರಿಗೆ ಹಾಸನ ಅಭಿವೃದ್ಧಿ ಕಾರ್ಯಗಳ ಬಗ್ಗೆಯೇ ಚಿಂತಿಸುತ್ತಿದ್ದಾರೆ.
ಇನ್ನೂ ಸಂತ್ರಸ್ತೆ ಮಹಿಳೆಯ ಜತೆ ನಾನೂ 6 ವರ್ಷಗಳ ಹಿಂದೆ ಮಾತನಾಡಿದ್ದು. ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಾನು ತಪ್ಪು ಮಾಡಿದ್ರೆ ಶಿಕ್ಷೆ ನೀಡಲಿ. ಏನೂ ತಪ್ಪು ಮಾಡದೇ ಜೈಲಿಗೆ ಹಾಕಿದ್ದಾರೆ ಎಂದು ಅವರು ಬೇಜಾರಾದರು.
ರೇವಣ್ಣ ಅವರು ಜೈಲಿಗೆ ಹೋದ ದಿನದಿಂದಲೂ ಅವರ ಆರೋಗ್ಯ ವಿಚಾರಿಸಲು ಹೋಗಬೇಕೆಂದು ಮನಸ್ಸಲ್ಲಿತ್ತು. ಭಾನುವಾರ ರಜೆ, ಬಿಡೋದಿಲ್ಲ ಅಂತಾ ಹೇಳಿದ್ರು. ಅದಕ್ಕೆ ಇಂದು ಮಾತನಾಡಲು ಬಂದಿದ್ದೇನೆ ಎಂದರು.