ಲಿಫ್ಟ್ ಕೆಟ್ಟಿದಕ್ಕೆ ವಾಸ್ತುದೋಷ ಎಂದು ಹೇಳಿದ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ

ಶುಕ್ರವಾರ, 12 ಅಕ್ಟೋಬರ್ 2018 (13:50 IST)
ಬೆಂಗಳೂರು : ಏನೇ ಕೆಲಸ ಮಾಡುವುದಾದರೂ ವಾಸ್ತು ನೋಡಿಕೊಂಡೆ ಕೆಲಸ ಮಾಡುವ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರು  ಇದೀಗ ಹಾಸನದಲ್ಲಿರುವ ಜಿಲ್ಲಾ ಕಚೇರಿಯ ಲಿಫ್ಟ್ ನ ವಾಸ್ತುದೋಷ ಪರಿಹರಿಸುವಂತೆ ಆದೇಶಿಸಿದ್ದಾರೆ.


ಕಾರಣ ಸಚಿವ ಎಚ್‌.ಡಿ. ರೇವಣ್ಣ ಹಾಗೂ ಇತರ ಶಾಸಕರು ಗುರುವಾರ ಸಂಜೆ ಹಾಸನ ಜಿಲ್ಲಾ ಪಂಚಾಯ್ತಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ಮುಗಿಸಿ ಲಿಫ್ಟ್‌ನಲ್ಲಿ ಕೆಳಗಿಳಿಯುತ್ತಿದ್ದಾಗ ಲಿಫ್ಟ್ ಓವರ್ ಲೋಡ್ ಆಗಿ ಅರ್ಧದಲ್ಲೆ  ನಿಂತಿದೆ. ಇದರಿಂದ ಕಂಗಲಾದ ಸಚಿವರು ಇದೀಗ ಲಿಫ್ಟ್‌ ಕೆಟ್ಟಿದ್ದಕ್ಕೆ ತಾಂತ್ರಿಕ ದೋಷ ಕಾರಣ ಅಲ್ಲ. ವಾಸ್ತದೋಷವೇ ಕಾರಣ ಎಂದಿದ್ದಾರೆ.


ಆದಕಾರಣ ಒಳ್ಳೆಯ ಪುರೋಹಿತರನ್ನು ಕರೆಸಿ ವಾಸ್ತುದೋಷವನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ರೇವಣ್ಣ ಸೂಚಿಸಿದ್ದಾರೆ. ಸಾಧ್ಯವಾದರೆ ಲಿಫ್ಟ್‌ ಅನ್ನು ಆಗ್ನೇಯ ಮೂಲೆಯಲ್ಲಿ ಹೊಸದಾಗಿ ನಿರ್ಮಿಸುವಂತೆ ಸಲಹೆ ನೀಡಿದ್ದಾರೆ. ಹಾಗೇ  ಇದು ಕೇವಲ ಹಾಸನದಲ್ಲಿರುವ ಜಿಲ್ಲಾ ಕಚೇರಿಯ ದೋಷ ಅಲ್ಲ. ವಿಧಾನಸೌಧ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಇರುವ ಲಿಫ್ಟ್‌ಗಳಲ್ಲಿ ವಾಸ್ತುದೋಷ ಇದೆ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ