ತೂಕ ಕಡಿಮೆ ಆಗಬೇಕೆ...? ಹಾಗಾದ್ರೆ ರಾತ್ರಿ ವೇಳೆ ಇವುಗಳನ್ನು ಸೇವಿಸಲೇಬೇಡಿ!

ಶುಕ್ರವಾರ, 12 ಅಕ್ಟೋಬರ್ 2018 (10:57 IST)
ಬೆಂಗಳೂರು : ಕೆಲವೊಂದು ಆಹಾರ ಪದಾರ್ಥಗಳನ್ನು ರಾತ್ರಿ ಮಲಗುವ ವೇಳೆ ತಿನ್ನಬಾರದು. ಇದರಿಂದ ಆರೋಗ್ಯಕ್ಕೆ ಒಳ್ಳೆದಾಗುವ ಬದಲು ಕೆಟ್ಟದಾಗುವುದೇ ಹೆಚ್ಚು. ಅವು ಯಾವುವು ಎಂಬುದು ಇಲ್ಲಿವೆ ನೋಡಿ.


ಬೆಣ್ಣೆ : ಬೆಣ್ಣೆಯ ಸೇವನೆ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ. ಆದರೆ ಇದೇ ಬೆಣ್ಣೆಯನ್ನು ರಾತ್ರಿಯ ಹೊತ್ತು ಸೇವನೆ ಮಾಡಬಾರದು. ಬೆಣ್ಣೆಯಲ್ಲಿ ಹೆಚ್ಚು ಫ್ಯಾಟ್‌ ಇರುತ್ತದೆ. ಇದನ್ನು ರಾತ್ರಿಯ ವೇಳೆ ಸೇವನೆ ಮಾಡಿದರೆ ತೂಕ ಹೆಚ್ಚಾಗುತ್ತದೆ.


ಬಿಳಿ ಬ್ರೆಡ್‌ : ಜನರು ಹೆಚ್ಚಾಗಿ ಬೆಳಗ್ಗಿನ ಬ್ರೇಕ್‌ಫಾಸ್ಟ್‌ನಲ್ಲಿ ಬ್ರೆಡ್‌ ಬಟರ್‌ ಸೇವನೆ ಮಾಡುತ್ತಾರೆ. ಆದರೆ ಅಪ್ಪಿತಪ್ಪಿಯೂ ಇದನ್ನು ರಾತ್ರಿ ವೇಳೆ ಸೇವಿಸಬೇಡಿ. ಯಾಕೆಂದರೆ ಬಿಳಿ ಬ್ರೆಡ್‌ನಲ್ಲಿ ಶುಗರ್‌ ಅಂಶ ಹೆಚ್ಚಾಗಿರೋದರಿಂದ ತೂಕ ಹೆಚ್ಚುತ್ತದೆ. ಅಂದರೆ ಇದನ್ನು ನೀವು ಯಾವಾಗಲೂ ಸೇವನೆ ಮಾಡುತ್ತಿದ್ದರೆ ದೇಹದಲ್ಲಿ ಫ್ಯಾಟ್‌ ಹೆಚ್ಚಾಗುತ್ತದೆ.


ಹಾಲು ಮತ್ತು ಬಾಳೆಹಣ್ಣು : ಹಾಲಿನ ಜೊತೆಗೆ ಬಾಳೆಹಣ್ಣು ಸೇವನೆ ಮಾಡಿದರೆ ದೇಹದ ತೂಕ ತುಂಬಾನೆ ಹೆಚ್ಚಾಗುತ್ತದೆ. ಯಾಕೆಂದರೆ ಹಾಲಿನಿಂದ ಶರೀರದಲ್ಲಿ ಪ್ರೊಟೀನ್‌ ಮತ್ತು ಬಾಳೆಹಣ್ಣಿನಿಂದ ಶುಗರ್‌ ದೇಹಕ್ಕೆ ಸೇರುತ್ತದೆ. ಬಾಳೆಹಣ್ಣು ಸೇವನೆ ಮಾಡಿದರೆ ಹೆಚ್ಚು ಕ್ಯಾಲರಿ ದೊರೆಯುತ್ತದೆ. ಆದುದರಿಂದ ಇದನ್ನು ರಾತ್ರಿಯ ಹೊತ್ತು ಸೇವನೆ ಮಾಡಬಾರದು, ಸೇವನೆ ಮಾಡಿದರೆ ತೂಕ ಬೇಗನೆ ಹೆಚ್ಚಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ