‘ಕೈ’ಯಿಂದ ರಿವರ್ಸ್​​ ಆಪರೇಷನ್​​​​​​​​?

ಗುರುವಾರ, 23 ಮಾರ್ಚ್ 2023 (18:55 IST)
ಕಳೆದ ಬಾರಿ 2018ರ ವಿಧಾನಸಬೆ ಚುನಾವಣೆಯಲ್ಲಿ BJPಗೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. JDS ಮತ್ತು ಕಾಂಗ್ರೆಸ್​​ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ್ರು. ಮಾಜಿ ಸಿಎಂ H.D. ಕುಮಾರಸ್ವಾಮಿ ಸಿಎಂ ಆಗಿದ್ರು. ಆದರೆ BJP ಆಪರೇಷನ್​​​​ ಕಮಲ ಮಾಡಿ ಸಮ್ಮಿಶ್ರ ಸರ್ಕಾರದ ಬುಡಕ್ಕೆ ಡೈನಮೇಟ್​​ ನೀಡುವ ಕಾರ್ಯ ಮಾಡಿತ್ತು. ಇದೀಗ 2023ರ ವಿಧಾನಸಭೆ ಚುನಾವಣೆ ಬಂದಿದ್ದು, ಕಾಂಗ್ರೆಸ್​​ ರಿವರ್ಸ್​​​​ ಆಪರೇಷನ್​​ಗೆ ಮುಂದಾಗಿದೆ. BJP ಎಮ್ಎಲ್​​ಸಿ ಬಾಬುರಾವ್​​​ ಚಿಂಚನಸೂರ್ BJPಗೆ ಗುಡ್​​ಬೈ ಹೇಳಿದ್ದು, ಕಾಂಗ್ರೆಸ್​​ ಸೇರ್ಪಡೆಗೊಂಡ್ರು. ​​ಈ ಬೆಳವಣಿಗೆ ಬೆನ್ನಲ್ಲೇ ಕಲಬುರಗಿ ಜಿಲ್ಲೆಯ BJP ಮುಖಂಡರು ಕೈ ಹಿಡಿಯುವ ಸಾಧ್ಯತೆ ಹೆಚ್ಚಿದೆ.. ಖರ್ಗೆ ವಿರುದ್ದ ಅಸಮಾಧಾನಗೊಂಡೇ ಕಾಂಗ್ರೆಸ್ ತೊರೆದಿದ್ದ ಮುಖಂಡರಾದ ಸಂಸದಉಮೇಶ್​​ ಜಾಧವ್, ಅಫಜಲಪೂರ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ, ಹಾಲಿ ವಿಧಾನ ಪರಿಷತ್ ಸದಸ್ಯ ಸುನಿಲ್ ವಲ್ಯಾಪೂರೆ ಜೊತೆಗೂ ಕಾಂಗ್ರೆಸ್ ಸಂಪರ್ಕ ಹೊಂದಿದೆ ಎನ್ನಲಾಗಿದೆ. ತಮ್ಮನ್ನು ನನ್ನ ವಿರುದ್ದ ಸ್ವ ಪಕ್ಷಿಯರೇ ಎತ್ತಿಕಟ್ಟುತ್ತಿದ್ದಾರೆ ಎಂದು ಅಸಮಾಧಾನಗೊಂಡಿರುವ ಮಾಲೀಕಯ್ಯ ಗುತ್ತೇದಾರ ಕಾಂಗ್ರೆಸ್​​ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಬಾರಿ ಸುನಿಲ್ ವಲ್ಯಾಪೂರೆ ಬಿಜೆಪಿಯಿಂದ ಚಿತ್ತಾಪೂರ ಕ್ಷೇತ್ರದಲ್ಲಿ ಸ್ಪರ್ದೆಗೆ ಯತ್ನಿಸುತ್ತಿದ್ದಾರೆ. ಆದರೆ ಸುನೀಲ್ ವಲ್ಯಾಪೂರೆಗೆ ಚಿಂಚೋಳಿ ಟಿಕೆಟ್ ಕೊಡುವುದಾಗಿ ಕಾಂಗ್ರೆಸ್ ಭರವಸೆ ಕೊಡಲಾಗಿದೆ ಎನ್ನಲಾಗಿದೆ. ಆ ಮೂಲಕ ಚಿತ್ತಾಪೂರದಲ್ಲಿ ಪ್ರೀಯಾಂಕ್ ಖರ್ಗೆ ಗೆಲುವು ಮತ್ತಷ್ಟು ಗಟ್ಟಿ ಮಾಡಿಕೊಳ್ಳುವ ಪ್ಲ್ಯಾನ್ ಕಾಂಗ್ರೆಸ್​ದ್ದಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ