ಮೀಟರ್ ಬಡ್ಡಿ ದಂಧೆ ರೌಡಿ ಶೀಟರ್ ಯಶಸ್ವಿನಿ ಬಂಧನ

ಶುಕ್ರವಾರ, 2 ಸೆಪ್ಟಂಬರ್ 2016 (18:34 IST)
ಕಳೆದ 122 ದಿನಗಳಿಂದ ತಲೆ ಮರೆಸಿಕೊಂಡಿದ್ದ ಮೀಟರ್ ಬಡ್ಡಿ ದಂಧೆ ರೌಡಿ ಶೀಟರ್ ಯಶಸ್ವಿನಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  
 
ಜೆಪಿ ನಗರದ ನಿವಾಸಿಯಾಗಿರುವ ಯಶಸ್ವಿನಿ ಮೀಟರ್ ಬಡ್ಡಿ ದಂಧೆಯಲ್ಲಿ ಖ್ಯಾತಳಾಗಿದ್ದು ಹಲವರನ್ನು ಸುಲಿಗೆ ಮಾಡಿರುವ ಆರೋಪಗಳನ್ನು ಎದುರಿಸುತ್ತಿದ್ದಾಳೆ. 
 
ಉಷಾರಾಣಿ ದೂರಿಗೆ ಸಂಬಂಧಿಸಿದಂತೆ ಚನ್ನಮ್ಮನ ಅಚ್ಚುಕಟ್ಟು ಕೆರೆ ಠಾಣಾ ಪೊಲೀಸರು ಆರೋಪಿ ಯಶಸ್ವಿನಿಯನ್ನು ಬಂಧಿಸಿದ್ದಾರೆ.
 
ಉಷಾರಾಣಿ ಉಮಾದೇವಿ ಯಶಸ್ವಿನಿ ಸ್ನೇಹಿತರಾಗಿದ್ದರು ಎನ್ನಲಾಗಿದೆ. ಉಮಾ ಮನೆಗೆ ಬಂದು ಯಶಸ್ವಿನಿ ಹಲ್ಲೆ ನಡೆಸಿದ್ದಾಳೆ ಎಂದು ಉಷಾರಾಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. 
 
ಕೋ-ಆಪರೇಟಿವ್ ಬ್ಯಾಂಕ್‌ಗಳಲ್ಲಿ ಸಾಲ ಕೊಡಿಸುವುದಾಗಿ ಆಮಿಷವೊಡ್ಡಿ ನೂರಾರು ಜನರಿಂದ ಹಣವನ್ನು ಪಡೆದು ವಂಚಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
 
 ಕಳೆದ ಮೇ 13 ರಿಂದ ತಲೆ ಮರೆಸಿಕೊಂಡಿದ್ದ ಯಶಸ್ವಿನಿ 122 ದಿನಗಳ ನಂತರ ಪೊಲೀಸ್ ಬಲೆಗೆ ಬಿದ್ದಿದ್ದಾಳೆ. 

ವೆಬ್ದುನಿಯಾವನ್ನು ಓದಿ