ಸಿದ್ದಗಂಗಾ ಮಠದಿಂದ ಅಕ್ಕಿ ಸಾಲ-ಸಮಾಜ ಕಲ್ಯಾಣಾಧಿಕಾರಿ ಸೇವೆಯಿಂದ ವಜಾ

geetha

ಬುಧವಾರ, 21 ಫೆಬ್ರವರಿ 2024 (17:35 IST)
ತುಮಕೂರು ;ಸಿದ್ದಗಂಗಾ ಮಠದಿಂದ ಅಕ್ಕಿ  ಸಾಲ ಪಡೆದಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ತುಮಕೂರು ಜಿಲ್ಲೆ ತಾಲೂಕು ಹಿಂದುಳಿದ ವರ್ಗಗಳ ಸಮಾಜ ಕಲ್ಯಾಣಾಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಗೀತಮ್ಮ ಅಮಾನತಾದ ಅಧಿಕಾರಿಯಾಗಿದ್ದು,  ಕರ್ತವ್ಯ ಲೋಪದ ಆರೋಪದಡಿಯಲ್ಲಿ ಇಲಾಖೆ ಆಯುಕ್ತ ಕೆ.ಎ.ದಯಾನಂದ ಈ ಆದೇಶ ಹೊರಡಿಸಿದ್ದಾರೆ.ಹಿಂದುಳಿದ ವರ್ಗಗಳ ಹಾಸ್ಟೆಲ್‌ ಗಳಿಗೆ ಅಕ್ಕಿ ಪೂರೈಸಲು ಮೂರು ದಿನಗಳ ಹಿಂದಷ್ಟೇ ಮಠದಿಂದ ಅಕ್ಕಿ ಸಾಲ ಪಡೆದಿರುವ ಬಗ್ಗೆ ಸಿದ್ದಗಂಗಾ ಮಠದ ಆಡಳಿತಾಧಿಕಾರಿಗಳು ಸ್ಪಷ್ಟನೆ ನೀಡಿದ್ದರು.ಈ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಗ್ಯಾರೆಂಟಿ ಯೋಜನೆಗಳಿಂದ ಸರ್ಕಾರ ಬಡವಾಗಿದೆಯೇ ಎಂಬ ಟೀಕೆಯೂ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. 
 
ಕೂಡಲೇ ಎಚ್ಚೆತ್ತ ಸರ್ಕಾರ ಗೀತಮ್ಮ ಅವರನ್ನು ಅಮಾನತುಗೊಳಿಸ ಕೈತೊಳೆದುಕೊಂಡಿದೆ. ನಾಗರಿಕ ಸರಬರಾಜು ಇಲಾಖೆಯಿಂದ ಅಗತ್ಯವಾಗಿರುವಷ್ಟು ಅಕ್ಕಿ ಪೂರೈಸಲಾಗಿದೆ. ಆದರೆ ಹಾಸ್ಟೆಲ್‌ ಗಳಿಂದ ಅಕ್ಕಿ ಎತ್ತುವಳೀ ಮಾಡಲು ಹಿಂದೇಟು ಹಾಕಿ ಈ ರೀತಿ ಸಾಲ ಪಡೆಯಲಾಗಿದೆ ಎಂದು ಗೀತಮ್ಮ ವಿರುದ್ದ ಆರೋಪಿಸಲಾಗಿದೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ