ತುಮಕೂರು :ರಾಜ್ಯ ಸರ್ಕಾರವು ಸಿದ್ದಗಂಗಾ ಮಠದ ಬಳಿ ಅಕ್ಕಿ ಸಾಲ ಪಡೆದಿರುವ ವಿಷಯ ಬೆಳಕಿಗೆ ಬಂದಿದೆ. ಇದರಿಂದಾಗಿ ಗ್ಯಾರೆಂಟಿ ಯೋಜನೆಗಳಿಂದಾಗಿ ಸರ್ಕಾರ ದಿವಾಳಿ ಸ್ಥಿತಿ ತಲುಪಿದೆಯೇ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಸರ್ಕಾರದಿಂದ ಸಕಾಲಕ್ಕೆ ಪಡಿತರ ಪೂರೈಕೆಯಾಗದ ಹಿನ್ನೆಲಯಲ್ಲಿ ಸರ್ಕಾರಿ ಅಧಿಕಾರಿಗಳು ಮಠ ಮೊರೆ ಹೋಗಿದ್ದಾರೆ. ಕಳೆದ ಎರಡು ಮೂರು ತಿಂಗಳಿಂದ ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳಿಗೆ ಅಕ್ಕಿ ಪೂರೈಸುತ್ತಿರುವ ವಿಷಯವನ್ನು ಸಿದ್ದಗಂಗಾ ಮಠದ ಆಡಳಿತಾಧಿಕಾರಿಗಳು ಖಚಿತಪಡಿಸಿದ್ದಾರೆ.
ಹಲವು ಬಾರಿ ಸರ್ಕಾರ ಶಾ ಲೆ ಮತ್ತು ಹಾಸ್ಟೆಲ್ ಗಳಿಗೆ ಪೂರೈಸಲು ನಮ್ಮ ಬಳಿ ಅಕ್ಕಿ ಸಾಲ ಪಡೆದಿದೆ. ಇದರ ಲೆಕ್ಕವೇ ಇಲ್ಲ ಎಂದು ಆಡಳಿತಾಧಿಕಾರಿಗಳು ಹೇಳಿದ್ದು, ಖಚಿತ ಅಂಕಿಅಂಶ ನೀಡಲು ನಿರಾಕರಿಸಿದ್ದಾರೆ. ಪ್ರತಿ ತಿಂಗಳೂ ಸರಿಸುಮಾರು 500 ಅಕ್ಕಿ ಚೀಲ ಸಾಲ ಪಡೆಯಲಾಗುತ್ತಿದೆ ಎನ್ನಲಾಗಿದೆ.