ಪೊಲೀಸ್ ಪೇದೆಗಳಿಂದ ರೈಫಲ್ ಕಳ್ಳತನ; ಅಮಾನತು

ಮಂಗಳವಾರ, 10 ಜುಲೈ 2018 (16:51 IST)
ಬೆಂಗಳೂರಿನಲ್ಲಿ ಪೊಲೀಸ್ ಪೇದೆಗಳಿಂದ ರೈಫಲ್ ಕಳ್ಳತನ  ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರೈಫಲ್ ಕಳ್ಳತನ ಮಾಡಿದ್ದ ನಾಲ್ವರು ಪೇದೆಗಳ ಅಮಾನತು ಮಾಡಲಾಗಿದೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಪೇದೆಗಳ ಅಮಾನತು ಆದವರು.

ಪೊಲೀಸ್ ಪೇದೆಗಳಾದ ಆನಂದ್ ಕೊಳೆಕಾರ್, ಪರಮಾನಂದ ಕೋಟಿ, ಅಶೋಕ್ ಬಿರಾದರ್ ಹಾಗೂ ಬಸವರಾಜ್ ಬೆಳಗಾವಿ ಅಮಾನತು ಆದವರು. ಅಮಾನತು ಮಾಡಿ ದಕ್ಷಿಣ ವಿಭಾಗ ಡಿಸಿಪಿ ಡಾ.ಶರಣಪ್ಪ ಆದೇಶ ಹೊರಡಿಸಿದ್ದಾರೆ. ಚುನಾವಣೆ ವೇಳೆ ಸಾರ್ವಜನಿಕರು ರೈಫಲ್ ಗಳನ್ನು ಠಾಣೆಗೆ ಸರೆಂಡರ್‌ ಮಾಡಿದ್ದರು. ಇದರಲ್ಲಿ ಎರಡು ಡಬಲ್ ಬ್ಯಾರಲ್ ರೈಫಲ್ ಕದಿದ್ದ ಪೊಲೀಸ್ ಪೇದೆಗಳು. ಕುಮಾರಸ್ವಾಮಿ ಲೇಔಟ್ ಠಾಣೆ ಪಿಎಸ್ ಐ ಸುಮಾ ಉಸ್ತುವಾರಿಯಲ್ಲಿದ್ದ ರೈಫಲ್ ಗಳು ಇವು ಆಗಿದ್ದವು.

ಪಿಎಸ್ ಐ ಸುಮಾ ಇಲ್ಲದಿದ್ದಾಗ ಸ್ಟೇಷನ್ ನಿಂದಲೇ ಕಳ್ಳತನ ಮಾಡಿದ್ದ ಪೇದೆಗಳು. ಇನ್ಸ್ ಪೇಕ್ಟರ್ ಹಾಗೂ ಪಿಎಸ್ ಐ ಮೇಲೆ ಆರೋಪ ಬರಲಿ ಎಂದು ಕದ್ದು ಮುಚ್ಚಿಟ್ಟಿದ್ದರು.   ಪೇದೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಠಾಣೆ ಸಿಬ್ಬಂಧಿ. ತೀವ್ರ ವಿಚಾರಣೆ ನಡೆಸಿದಾಗ ಪೇದೆಗಳ ಬಣ್ಣ ಬಯಲಾಗಿದೆ. ತಾವೇ ರೈಫಲ್ ಕದಿರುವುದಾಗಿ ತಪ್ಪೋಪಿಕೊಂಡಿರುವ ನಾಲ್ವರು ಪೇದೆಗಳು.  ಕರ್ತವ್ಯಲೋಪ ಹಿನ್ನಲೆ ನಾಲ್ವರು ಪೇದೆಗಳನ್ನು ಅಮಾನತು ಮಾಡಿ ಡಿಸಿಪಿ ಅಮಾನತು ಆದೇಶ ಹೊರಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ