ಕೆಲ ದಿನಗಳಿಂದ ನಗರದ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ನಿಗವಹಿಸಿದ್ದು, ರೌಡಿ ಶೀಟರ್ ಮನೆಗಳ ವಿಲೆ ರೇಡ್ ಮಾಡುತ್ತಲೇ ಇದ್ದಾರೆ. ಇದೀಗ ಬೆಂಗಳೂರು ಗ್ರಾಮಾಂತರ ನೆಲಮಂಗಲ ಪೊಲೀಸರು ರಾತ್ರಿ ನಿದ್ದೆ ಮಂಪರಿನಲ್ಲಿದ್ದ ರೌಡಿ ಶೀಟರ್ ಗಳಿಗೆ ಬೆಳ್ಳಂ ಬೆಳಿಗ್ಗೆ ಬಿಗ್ ಶಾಕ್ ಕೊಟ್ಟಿದ್ದು, 120 ಕ್ಕೂ ಹೆಚ್ಚು ರೌಡಿ ಶೀಟರ್ ಮನೆಗಳ ಕಾಲಿಂಗ್ ಬೆಲ್ ಒತ್ತಿದ್ದಾರೆ, ಹೌದು, ಬೆಂಗಳೂರು ಗ್ರಾಮಾಂತರ ನೆಲಮಂಗಲ ಉಪವಿಭಾಗದ ಪೊಲೀಸರು ಗ್ರಾಮಾಂತರ ಎಸ್ಪಿ ಕೋನಾ ವಂಶೀಕೃಷ್ಣ ನೇತೃತ್ವದಲ್ಲಿ ರೌಡಿ ಶೀಟರ್ ಮನೆಗಳ ಮೇಲೆ ದಾಳಿ ಮಾಡಿದದ್ದು, ರಾತ್ರಿ ಹಾಯಾಗಿ ನಿದ್ದೆ ಮಾಡುತ್ತಿದ್ದ, ಸುಮಾರು 120 ಕ್ಕೂ ಹೆಚ್ಚು ರೌಡಿ ಶೀಟರ್ ಮನೆಗಳ ಕಾಲಿಂಗ್ ಬೆಲ್ ಒತ್ತಿ ರೌಡಿಶಿಟರ್ಗಳ ನಿದ್ದೆಗೆಡಿಸಿದ್ದಾರೆ.ನೆಲಮಂಗಲ,ಮಾದನಾಯಕನಹಳ್ಳಿ,ತ್ಯಾಮಗೊಂಡ್ಲು,ಗ್ರಾಮಾಂತರ, ಮತ್ತು ದಾಬಸ್ ಪೇಟೆ ವ್ಯಾಪ್ತಿಯ ರೌಡಿಶೀಟರ್ಗಳನ್ನು ವಶಕ್ಕೆ ಪಡೆದಿದ್ದು, ನೆಲಮಂಗಲ ನಗರ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪೆರೇಡ್ ನಡೆಸಿದ್ದಾರೆ. ಇನ್ನೂ ಪೆರೇಡ್ ವೇಳೆ ರೌಡಿ ಶೀಟರ್ ಗಳಿಗೆ ಎಸ್ಪಿ ಕೋನಾ ವಂಶೀಕೃಷ್ಣ ಬಸವರಾಜು ಖಡಕ್ ವಾರ್ನಿಂಗ್ ನೀಡಿದ್ದಾರೆ. ಹಾಗೂ ರೌಡಿ ಶೀಟರ್ ಒಬ್ಬನ ಟ್ಯಾಟು ನೋಡಿ ಗರಂ ಆದ ಎಸ್ಪಿ ಬಾಲಬಿಚ್ಚಿ ಹವಾ ಮಾಡಿದ್ರೆ ಗೂಂಡಾ ಕಾಯಿದೆ ಜಾರಿ ಮಾಡಿ ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.