ಹನಿಟ್ರ್ಯಾಪ್ ಮೂಲಕ ವೈದ್ಯನಿಂದ 14 ಲಕ್ಷ ಹಣ ವಸೂಲಿ: ಆರೋಪಿಗಳು ಅರೆಸ್ಟ್

ಮಂಗಳವಾರ, 16 ಮೇ 2017 (15:49 IST)
ಹನಿಟ್ರ್ಯಾಪ್ ಮೂಲಕ ಜನರನ್ನು ವಂಚಿಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಜಾಲದ ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
 
ವೈದ್ಯನನ್ನು ಕೋಣೆಗೆ ಕರೆದುಕೊಂಡು ಹೋಗಿ ಬೆತ್ತಲಾಗಿ ನಿಲ್ಲಿಸಿ ಯುವತಿಯೊಂದಿಗೆ ವಿವಿಧ ಭಂಗಿಗಳಲ್ಲಿ ಅಸಹ್ಯ ಫೋಟೋಗಳನ್ನು ತೆಗೆಸಿ ಆರೋಪಿಗಳು ಹಣ ನೀಡುವಂತೆ ಒತ್ತಾಯಿಸಿದ್ದರು. ಇಲ್ಲವಾದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ವೈದ್ಯನ ಫೋಟೋಗಳನ್ನು ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು.
 
ತಕ್ಷಣಕ್ಕೆ ಹಣವಿಲ್ಲವಾದ್ದರಿಂದ ಹಣ ಹೊಂದಿಸಿಕೊಡುವುದಾಗಿ ವೈದ್ಯನು ಆರೋಪಿಗಳಿಗೆ ಮನವಿ ಮಾಡಿದ್ದಾನೆ. ನಂತರ ವೈದ್ಯನು ಆರ್‌ಟಿಜಿಎಸ್ ಮೂಲಕ 14 ಲಕ್ಷ ಹಣ ವರ್ಗಾವಣೆ ಮಾಡಿದ್ದಾನೆ.
 
ಆದರೆ, ಆರೋಪಿಗಳು ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದರಿಂದ ಬೇಸತ್ತು ಕದರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪೊಲೀಸರು ಆರೋಪಿಗಳ ಕಾರಿನ ನೊಂದಣಿ ಸಂಖ್ಯೆಯಿಂದ ಆರೋಪಿಗಳ ಪತ್ತೆಯಾಗಿದೆ.  
 
ಕದರಿ ಠಾಣೆಯ ಪೊಲೀಸರು ಪ್ರಕರಣವನ್ನು ಬೆಳ್ತಂಗಡಿ ಪೊಲೀಸರಿಗೆ ವರ್ಗಾಯಿಸಿದ್ದರು. ಬೆಳ್ತಂಗಡಿ ಪೊಲೀಸರು ಉಲ್ಲಾಳ ಮೂಲದ ರಂಜಿ. ಸಾಧಿಕ್‌ನನ್ನು ಬಂಧಿಸಿದ್ದಾರೆ. ಯುವತಿಯ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ