ಸಂಗೊಳ್ಳಿ ರಾಯಣ್ಣನ ನಂದಗಡ ಗ್ರಾಮಾಭಿವೃದ್ಧಿಗೆ 80 ಕೋಟಿ: ಸಿಎಂ ಘೋಷಣೆ

ಭಾನುವಾರ, 15 ಆಗಸ್ಟ್ 2021 (21:32 IST)
ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನ ನೇಣಿಗೇರಿಸಿದ  ನಂದಗಡ ಗ್ರಾಮದ ಅಭಿವೃದ್ದಿ ಗಾಗಿ 80 ಕೋಟಿ ರೂಪಾಯಿಗಳನ್ನು ಬಿಡುಗಡೆ  ಮಾಡಿರುವುದಾಗಿ ಮು
ಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಇಂದು‌ ಬೆಳಿಗ್ಗೆ ಸಂಗೊಳ್ಳಿ ರಾಯಣ್ಣ ರೈಲ್ವೆ ಸಮೀಪದ ರಾಯಣ್ಣನ ಪ್ರತಿಮೆಗೆ ಹಾರ ಹಾಕಿ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದ ಅವರು, ಈ ಅನುದಾನವನ್ನು ಹಿಂದೆ ಯಡಿಯೂರಪ್ಪ‌ನವರು ಮಂಜೂರು ಮಾಡಿದ್ದರು ಎಂದು ಹೇಳಿದ ಅವರು ಅಲ್ಲಿರುವ ಸೈನಿಕ ಶಾಲೆ ರಾಷ್ಟ್ರೀಯ ಮಟ್ಟದ ಖ್ಯಾತಿಯಾಗಿದೆ. ಉತ್ತಮ್ಮ‌ ಶಿಕ್ಷಣ. ಶಿಸ್ತು. ದೇಶಭಕ್ತಿ ಬೆಳೆಸುವ ಶಾಲೆಯಾಗಿದೆ. ಇದರ ಸಮಗ್ರ‌ ಅಭಿವೃದ್ದಿಗೆ ಸರ್ಕಾರ ಬದ್ದವಾಗಿದೆ.ಎಂದರು.
ರಾಯಣ್ಣ ಮತ್ತು‌‌ಕಿತ್ತೂರ ರಾಣಿ ಚನ್ನಮ್ಮ ರವರ ಸಂಬಂಧ ತಾಯಿ ‌ಮಗನ ‌ಸಂಬಂದವೆಂದರು. ಚನ್ನಮ ‌ಸಿಪಾಯಿ‌ದಂಗೆಗೆ ಮುನ್ನ ನಲವತ್ತು ವರ್ಷಗಳ ಹಿಂದೆಯೇ ಬ್ರಿಟಿಷರವಿರುದ್ದ ಎರಡು ಯುದ್ದಗಳನ್ನು ಮಾಡಿದ್ದರು.ಸಂಗೊಳ್ಳಿ ರಾಯಣ್ಣ‌ ‌ಸತ್ತ‌ ಅಂತ‌ ‌ಸುದ್ದಿ ತಿಳಿದ‌ ತಕ್ಷಣವೇ ಚೆನ್ನಮ್ಮ ಸಾವನ್ನಪ್ಪುತ್ತಾರೆ. ದೇಶದ್ರೋಹಿಗಳ ಸಂಚಿನಿಂದ ರಾಯಣ್ಣ ಬಂದಿಯಾಗುತ್ತಾನೆ. ಆನಂತರ ನೇಣಿಗೆ ಹಾಕುತ್ತಾರೆ.ರಾಯಣ್ಣನ ಹೆಸರು‌ ಹೇಳಿದರೆ ನಮ್ಮ‌ ಕೊದಲು‌ ನಿಲ್ಲುತ್ತದೆ.ಎಂದು ರಾಯಣ್ಣನ ಬಗ್ಗೆ ಗುಣಗಾನ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ