‘ವೈದ್ಯರ ನಡೆ ಮನೆ ಬಾಗಿಲಿನ ಕಡೆ‘ ಅಭಿಯಾನಕ್ಕೆ ಚಾಲನೆ

ಸೋಮವಾರ, 16 ಆಗಸ್ಟ್ 2021 (14:09 IST)
ಬೆಂಗಳೂರು(ಆ.16): ‘ವೈದ್ಯರ ನಡೆ ಮನೆ ಬಾಗಿಲಿನ ಕಡೆ‘ ಅಭಿಯಾನಕ್ಕೆ ಇಂದು ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪಾಲಿಕೆ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತಾ, ವಿಶೇಷ ಆಯುಕ್ತ ರಂದೀಪ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇದು ಬಿಬಿಎಂಪಿ ವತಿಯಿಂದ ನಡೆಯುತ್ತಿರುವ ಅಭಿಯಾನವಾಗಿದ್ದು, ಕೊರೋನಾ ಕಂಟ್ರೋಲ್ ಮಾಡಲು ಪಣ ತೊಟ್ಟಿದೆ. 

ಬಿಬಿಎಂಪಿ ಇದರ ಭಾಗವಾಗಿ ವೈದ್ಯರ ನಡೆ ಮನೆ ಬಾಗಿಲಿನ ಕಡೆ ಅಭಿಯಾನವನ್ನು ಹಮ್ಮಿಕೊಂಡಿದೆ.  ಈ ಅಭಿಯಾನದಲ್ಲಿ ವೈದ್ಯರು ಮನೆ ಬಾಗಿಲಿಗೆ ಹೋಗಿ ಕೊರೋನಾ ಟೆಸ್ಟ್ ಮಾಡಲಿದ್ದಾರೆ.
ಇದಕ್ಕಾಗಿ ತಂಡಗಳನ್ನು ರಚನೆ ಮಾಡಿರುವ ಬಿಬಿಎಂಪಿ, ಪ್ರತಿ ವಾರ್ಡ್ನಲ್ಲಿಯೂ ವೈದ್ಯರು ರೌಂಡ್ಸ್ ನಡೆಸಲಿದ್ದಾರೆ. ಒಂದು ತಂಡ ಕನಿಷ್ಠ ಅಂದರೂ 50 ಮನೆಗಳಿಗೆ ಭೇಟಿ ಕೊಡಬೇಕು. ಕೊರೋನಾ ರೋಗ ಲಕ್ಷಣ ಇರುವ ಮನೆ ಜನರ ಕೋವಿಡ್ ಟೆಸ್ಟ್ ಮತ್ತು ವ್ಯಾಕ್ಸಿನ್ ಬಗ್ಗೆಯೂ ತಂಡ ಮಾಹಿತಿ ಪಡೆಯಲಿದೆ.
ಮನೆ-ಮನೆ ಸಮೀಕ್ಷಾ ಕಾರ್ಯದ ಪ್ರಮುಖ ಅಂಶಗಳು:
ಪ್ರತೀ ತಂಡವು ಪ್ರತೀ ನಿತ್ಯ ಕನಿಷ್ಠ 50 ಮನೆಗಳ ಸಮೀಕ್ಷೆ ನಡೆಸುವುದು.
•ಪ್ರತೀ ವಾರ್ಡ್ ಗೆ 5 ವೈದ್ಯರ ತಂಡವಿರಲಿದೆ.
•ಅಗತ್ಯಕ್ಕನುಗುಣವಾಗಿ ಹೆಚ್ಚಿನ ತಂಡಗಳನ್ನು ನಿಯೋಜನೆ.
•ಪ್ರತೀ ತಂಡದಲ್ಲಿ ಒಬ್ಬ ವೈದ್ಯಾಧಿಕಾರಿ(ಎಂ.ಬಿ.ಬಿ.ಎಸ್/ಬಿ.ಡಿ.ಎಸ್/ಆಯುಷ್) ಮತ್ತು ಅರೆವೈದ್ಯಕೀಯ  ಸಿಬ್ಬಂದಿಯನ್ನೊಳಗೊಂಡ ತಂಡವಿರಲಿದೆ.
•ಮನೆ-ಮನೆಗೆ ತಂಡಗಳು ಭೇಟಿ ನೀಡುವ ಸಲುವಾಗಿ ವಾಹನಗಳ ನಿಯೋಜನೆ.
•ಮನೆ ಭೇಟಿಯ ಸಮಯದಲ್ಲಿ ಕೋವಿಡ್-19 ಸೋಂಕಿತರು ಪತ್ತೆಯಾದಲ್ಲಿ, ಸದರಿ ಸೋಂಕಿತರಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ಹೋಂ ಐಸೋಲೇಷನ್ ಕಿಟ್ ನೀಡಲಾಗುವುದು.
•ಸಮೀಕ್ಷಾ ಕಾರ್ಯದಲ್ಲಿ ಪಡೆದ ಮಾಹಿತಿಯನ್ನು ಪ್ರತೀ ದಿನ ನಿಗದಿತ ಬಿಬಿಎಂಪಿ ವೆಬ್ ಸೈಟ್ ನಲ್ಲಿ ಹಾಕಬೇಕು.
ಇದೇ ವೇಳೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್,  ಆಗಸ್ಟ್ 15 ರ ನಂತರ ಕಠಿಣ ನಿಯಮ ಜಾರಿ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ಬೆಂಗಳೂರಿನಲ್ಲಿ ಕಳೆದ 15 ದಿನಗಳಿಂದ 300 ಹಾಗೂ 400 ಕೊರೋನಾ ಕೇಸ್ಗಳು ಪತ್ತೆಯಾಗುತ್ತಿವೆ. ಅದೊಂದು ರೀತಿ ಬಿಪಿ, ಶುಗರ್ ನಾರ್ಮಲ್ ಲೈನ್ ಇದ್ದ ಹಾಗೆ. ಇದೊಂದು ಗೆರೆಯನ್ನು ದಾಟಿದ್ರೆ ಟಫ್ ರೂಲ್ಸ್ ಗಳ ಬಗ್ಗೆ ತಜ್ಞರೊಂದಿಗೆ ಚರ್ಚಿಸಲಾಗುವುದು. ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಅವಧಿ ವಿಸ್ತರಣೆ ವಿಚಾರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ