ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟಕ್ಕೆ ರುಪ್ಸಾ ನಿರ್ಧಾರ

ಮಂಗಳವಾರ, 24 ಆಗಸ್ಟ್ 2021 (16:23 IST)
ಶಾಲೆ ಪ್ರಾರಂಭವಾಗುತ್ತಿದ್ದಂತೆ ಶುರುವಾಯ್ತು ಸರ್ಕಾರಕ್ಕೆ ಹೊಸ
ಟೆನ್ಷನ್. ಇಂದು ಶಾಸಕರ ಭವನದಲ್ಲಿ ರುಪ್ಸಾ ಕರ್ನಾಟಕದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ನೇತೃತ್ವದಲ್ಲಿ ಮಹತ್ವದ ಸಭೆಯನ್ನು ಕರೆಯಲಾಗಿತ್ತು.
ಸಭೆಯಲ್ಲಿ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು. ಸರ್ಕಾರಕ್ಕೆ ಈಗಾಗಲೇ ಬೇಡಿಕೆಗಳ ಬಗ್ಗೆ ಸಾಕಷ್ಟು ಮನವಿ ಮಾಡಿದ್ದರೂ ಸಹ ದಶಕಗಳಿಂದ ಹೋರಾಟ ಮಾಡಿಕೊಂಡು ಬಂದ್ರು ಪರಿಹಾರ ಸಿಕ್ಕಿಲ್ಲ.
ಸೆಪ್ಟೆಂಬರ್ ೧೫ ರವರೆಗೆ ಸರ್ಕಾರಕ್ಕೆ ಗಡವು ಕೊಟ್ಟಿದ್ದೇವೆ ಹೀಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸದೇ ಹೋದ್ರೆ ಈ ಭಾರಿ ಉಗ್ರ ಹೋರಾಟ ಮಾಡುವುದಾಗಿ ಖಾಸಗಿ ಶಾಲೆಗಳ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಬೇಡಿಕೆಗಳು
1999ರ ನಂತರ ಖಾಸಗಿ ಅನುದಾನಿತ ರಹಿತ ಕನ್ನಡ ಮಾಧ್ಯಮ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸುವುದು
ನೂತನ ಪಿಂಚಣಿ ಪದ್ಧತಿಯನ್ನ ರದ್ದುಗೊಳಿಸಿ, ಹಳೆಯ ಪಿಂಚಣಿ ಪದ್ಧತಿಯನ್ನ ಜಾರಿಗೊಳಿಸುವುದು
ಈಗಾಗಲೇ ನಿವೃತ್ತರಾದ ಹಾಗೂ ಮರಣ ಹೊಂದಿದ ೨೦೦೬ ರ ನಂತರದ ನೌಕರರಿಗೆ ತಕ್ಷಣ ಪಿಂಚಣಿ ಜಾರಿಗೊಳಿಸುವುದು
ಜ್ಯೋತಿ ಸಂಜೀವಿನಿ ಯೋಜನೆ ಅನುದಾನಿತ/ ಅನುದಾನ ರಹಿತ ಶಾಲಾ ಕಾಲೇಜು ಸಿಬ್ಬಂದಿಗೆ ವಿಸ್ತರಿಸುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ